Tuesday 7 March 2017

ಕವನ - ಮಹಿಳಾದಿನ




ಶತಮಾನಗಳ ತುಳಿತ
ಸಹಿಸಿ ಸಹಿಸಿ
ಕಟ್ಟೆಯೊಡೆಯಿತೊಂದಿನ

ಬಾಗಿ ಬಾಗಿ ಬೆನ್ನು
ಮುರಿದೇ ಹೋಗುವ ಹೊತ್ತಲ್ಲಿ ಸೆಟೆದು ನಿಂತಿತಾ ದಿನ

ಮಾಡಿ ಮಾಡಿ ಸವೆದ
ಕೈಗಳು ಹೋರಾಟಕಾಗಿ ಜೋಡಿಸಿಕೊಂಡಿತದೇ ದಿನ

ನಾನೂ ಸಮಾನಳೆಂದು
ಅಬ್ಬರಿಸುತ
ಸೆಡ್ಡು ಹೊಡೆದಾ.. ವೀರದಿನ

ದಶದಿಕ್ಕಿನಲಿ
ಧ್ವನಿತಗೊಂಡ
ವಿಜಯ ಕಹಳೆಯೂದಿದ ದಿನ

ಎರಡೇನು
ಸಾಸಿರ ಜಡೆಗಳು
ಭದ್ರಕೋಟೆ ಹೆಣೆದುಕೊಂಡ
ಮಹಾ ದಿನ

ಮಹಿಳಾದಿನ

- ಉಷಾಗಂಗೆ 

No comments:

Post a Comment