Tuesday 7 March 2017

ನಾಟಕ - ಅಮ್ಮನ ದಿನ


ಸುಮ ಶೀಲಾಳನ್ನು ಭೇಟಿ ಮಾಡಲು ಅವರ ಮನೆಗೆ ಬರುತ್ತಾಳೆ. ಇಬ್ಬರೂ ಬಹಳ ಹಳೆಯಆತ್ಮೀಯ ಸ್ನೇಹಿತೆಯರು. ಕಾಲೇಜು ದಿನಗಳಿಂದಲೂ ಒಬ್ಬರನ್ನೊಬ್ಬರು ಅರಿತಿದ್ದರು.
ಸುಮ : ಶೀಲಾ ಈ ಬಾರಿಯಾದರೂ ಮಹಿಳಾ ದಿನದ ಕಾರ್ಯಕ್ರಮಕ್ಕೆ ಬರುತ್ತೀಯಾ?
ಶೀಲಾ : ಯಾವತ್ತು ಕಾರ್ಯಕ್ರಮ?
ಸುಮ : ನಾಡಿದ್ದು.
ಶೀಲಾ : ಇಲ್ಲ ಸುಮಬರಲು ಸಾಧ್ಯವಾಗುವುದಿಲ್ಲವೇನೋ.
ಸುಮ : ಏನೇ ಹಾಗೆಂದರೆನಿನಗೆ ಬರಲು ಇಷ್ಟವಿದೆಯೋ ಇಲ್ಲವೊ?
ಶೀಲಾ : ನನಗೂ ಬರಲು ಇಷ್ಟ. ಆದರೆ ನಿನಗೆ ನಮ್ಮ ಮನೆಯ ಪರಿಸ್ಥಿತಿ ಗೊತ್ತಿಲ್ಲವೇ?
ಸುಮ : ಇದೇ ಹಳೆ ಕಥೆಯನ್ನು ವರ್ಷಾನುಗಟ್ಟಲೆಯಿಂದ ಹೇಳುತ್ತಲೇ ಬಂದಿದ್ದೀಯಾ.
ಶೀಲಾ : ನಾನೇನು ಮಾಡಲಿ ಸುಮ. ನಾಡಿದ್ದು ಸಂಜೆ ರಾಕೇಶ್ ಎಲ್ಲೊ ಟ್ರಿಪ್ ಹೊರಟಿದ್ದಾನೆ. ರಮ್ಯಳಿಗೆ ಯಾವುದೋ ಪಾರ್ಟಿ ಇದೆಯಂತೆ. ಜೊತೆಗೆ ಇವರು ಬರುವುದು ನಾಳೆ. ನಂತರ ಅವರ ಪ್ಲಾನ್ ಏನೋ ಯಾರಿಗೆ ಗೊತ್ತು.
ಸುಮ : ರಾಕೇಶ್ ಟ್ರಿಪ್ ಹೋಗೋದಕ್ಕುರಮ್ಯ ಪಾರ್ಟಿಗೆ ಹೋಗೋದಕ್ಕುನೀನು ಕಾರ್ಯಕ್ರಮಕ್ಕೆ ಬರೋದಿಕ್ಕು ಏನು ಸಂಬಂಧ?
ಶೀಲಾ : ಏನೇ ಹೀಗೆ ಕೇಳ್ತಾ ಇದ್ದೀಯ. ಅವರ ಬಟ್ಟೆ ಐರನ್ ಮಾಡಬೇಕುಪ್ಯಾಕ್ ಮಾಡಬೇಕು.
ಸುಮ : ನಿಲ್ಲಿಸಮ್ಮ ಸಾಕುಅವರೇನು ಚಿಕ್ಕ ಮಕ್ಕಳಾಅವರಿಗೇ ಮಾಡಿಕೊಳ್ಳಲು ಹೇಳು.
ಶೀಲಾ : ಅದು ಹೇಗೆ ಸಾಧ್ಯಇಷ್ಟು ವರ್ಷ ನಾನೇ ಮಾಡ್ತಾ ಬಂದಿದ್ದೀನಿ.
ಸುಮ : ಅದೇ ತಪ್ಪು ನೀನು ಮಾಡಿರೋದು.
ಶೀಲಾ : ಮಕ್ಕಳಿಗೆ ನಾವು ಕೆಲಸ ಮಾಡಿಕೊಡಬಾರದಾ?
ಸುಮ : ಮಾಡಿಕೊಡಬೇಕುಅಗತ್ಯವಿದ್ದರೆ. ಆದರೆ ಅವರವರ ಕೆಲಸವನ್ನು ಅವರವರೇ ಮಾಡಿಕೋಬೇಕು. ಈಗ ನೋಡು ನಮ್ಮ ಮನೆಯಲ್ಲಿ ಸಂಜಯ್ಸಂಜನಾ ಅವರೇ ಮಾಡಿಕೊಂಡು ಹೋಗುವುದಿಲ್ಲವಾ. ಎಷ್ಟೋ ಬಾರಿ ನನ್ನ ಕೆಲಸವನ್ನೂ ಮಾಡಿಕೊಡ್ತಾರೆ.
ಶೀಲಾ : ನೀನು ಬಿಡಮ್ಮ ಅದೃಷ್ಟವಂತಳು. ಅರ್ಥಮಾಡಿಕೊಳ್ಳುವ ಪತಿಮಕ್ಕಳು (ನಿಟ್ಟುಸಿರಿಡುವಳು)
ಸುಮ : ಅದೃಷ್ಟ ಏನು ಬಂತು. ಇದೆಲ್ಲ ನಾನು ಮಾಡಿಕೊಂಡು ಬಂದದ್ದು. ಮದುವೆಯಾಗುವ ಮುನ್ನವೇ ಸುರೇಶ್ ಜೊತೆಗೆ ನನ್ನ ಎಲ್ಲಾ ಚಟುವಟಿಕೆಗಳ ಬಗ್ಗೆ ಹೇಳಿಅವರು ಅಡ್ಡಿಪಡಿಸಬಾರದೆಂದೇ ಹೇಳಿದೆ. ಸ್ವಲ್ಪ ದಿನ ಹೊಂದಾಣಿಕೆಗೆ ಕಷ್ಟಾನೇ ಆಯಿತು. ಆದರೆ ನಂತರ ಎಲ್ಲವೂ ಸರಿಹೋಯಿತು. ಮಕ್ಕಳನ್ನು ನಾನು ಮೊದಲಿನಿಂದಲೂ ಈ ರೀತಿಯೇ ಬೆಳೆಸಿದೆ. ಹಾಗಾಗಿ ಸಮಸ್ಯೆಯೇ ಇಲ್ಲ
ಶೀಲಾ : ನಾನೇನು ಮಾಡಲಿ. ಇಷ್ಟು ವರ್ಷ ನಾನು ತಪ್ಪು ಮಾಡಿದೆ ಅನಿಸುತ್ತೆ. ಈಗ ಬದಲಾಯಿಸಲು ಸಾಧ್ಯವಿಲ್ಲ
ಸುಮ : ಈಗಲೂ ಕಾಲ ಮಿಂಚಿಲ್ಲ. ನೀನು ಮನಸ್ಸು ಮಾಡಿದರೆ ಎಲ್ಲ ಬದಲಾಗುತ್ತೆ.
ಶೀಲಾ : ನಿಜವಾಗಲೂ (ಆಶ್ಚರ್ಯದಿಂದ ಕೇಳಿದಳು. ಮರುಕ್ಷಣವೇ ನಿರಾಸೆಯಿಂದ) ಇಲ್ಲ ಬಿಡು ಆಗಲ್ಲ.
ಸುಮ : ಯಾಕಾಗಲ್ಲ. ನಿನ್ನ ಪತಿಮಕ್ಕಳು ಕೆಟ್ಟವರೇನೂ ಅಲ್ಲ. ಅವರಿಗೆ ಅರ್ಥವಾಗುವಂತೆ ಯಾರೂ ಹೇಳಿಲ್ಲ. ನೀನು ಬಿಡಿಸಿ ಹೇಳು.
ಶೀಲಾ : ಇಲ್ಲ ಕಣೇ. ಈ ಬಗ್ಗೆ ಕೆಲವು ಸಾರಿ ಟಿವಿಯಲ್ಲಿ ಬಂದಾಗಲೂ ಅವರ್ಯಾರು ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.
ಸುಮ : ಅದೆಲ್ಲ ಬಿಡು. ನೀನು ಮೊದಲು ರೆಡಿ ಇದ್ದೀಯ ಬದಲಾಗಲುಅದನ್ನು ಹೇಳು. ನೀನು ಬದಲಾಗದಿದ್ದರೆಅವರ್ಯಾರು ಬದಲಾಗಲ್ಲ.
ಶೀಲಾ : ನಮ್ಮ ಮನೆ ನಿಮ್ಮ ಮನೆಯಂತಾಗುತ್ತದೆ ಎಂದರೆ ನಾನು ಏನು ಬೇಕಾದರೂ ಮಾಡಲು ಸಿದ್ಧ. (ಉತ್ಸಾಹದಿಂದ ಹೇಳಿಮರುಕ್ಷಣವೇ) ತುಂಬಾ ಕಷ್ಟಾನೇನೇ?
ಸುಮ : ಹೇನೀನೊಬ್ಬಳು. ದೃಢವಾಗಿ ಇದ್ದರೆ ಎರಡೇ ದಿನದಲ್ಲಿ ಎಲ್ಲವೂ ಸರಿಹೋಗುತ್ತದೆ.
ಶೀಲಾ : ಸರಿ ಹೇಳು. ನಾನು ಏನು ಮಾಡಬೇಕು.
(ಸುಮ ಶೀಲಾಳ ಕಿವಿಯಲ್ಲಿ ಏನೋ ಹೇಳುವಳು.)
ಶೀಲಾ: (ಬೆಚ್ಚಿಬಿದ್ದು) ಏನೇ ನೀನು ಹೇಳುತ್ತಿರುವುದುನಿಜವಾಗಲೂ ನನ್ನ ಕೈಲಿ ಆಗುತ್ತಾ?
ಸುಮ : ಇದೇ ಪ್ರಶ್ನೆಯನ್ನೇ ಪದೇ ಪದೇ ಕೇಳಬೇಡ. ನೀನು ಹೀಗೆ ಇನ್ನೆಷ್ಟು ದಿನ ಇರುತ್ತೀಯ. ನಿನ್ನ ಆಸೆಕನಸುಗಳಿಗೆ ಗೋರಿಯನ್ನು ಕಟ್ಟಿಕೊಂಡು. ನೀನು ಮನಸ್ಸು ಮಾಡಿದರೆ ಖಂಡಿತ ಆಗುತ್ತದೆ. ನೆನಪಿಸಿಕೊ ನೀನು ಕಾಲೇಜಿನಲ್ಲಿ ಹೇಗಿದ್ದೆಎಷ್ಟು ಬೋಲ್ಡ್ ಆಗಿದ್ದೆಸ್ವಲ್ಪ ಗಟ್ಟಿ ಮನಸ್ಸು ಮಾಡಿಕೊ. ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತೆ. ಬೇಕಾದ್ರೆ ಬೆಟ್ ಕಟ್ಟು. ನೀನು ಈ ಬಾರಿ ಕಾರ್ಯಕ್ರಮಕ್ಕೆ ಬರುತ್ತೀಯಾ. ಸುಧೀರ್ ನಿನ್ನನ್ನು ಕರೆತಂದುಬಿಡುತ್ತಾರೆ.
ಶೀಲಾ : (ಖುಷಿಯಿಂದ) ಹೌದೇನೆಹಾಗಾದ್ರೆ ಪ್ರಯತ್ನಿಸಿಯೇ ಬಿಡುತ್ತೇನೆ.
(ಶೀಲಾಳಿಗೆ ಇನ್ನಷ್ಟು ಕಿವಿಮಾತು ಹೇಳಿ ಸುಮ ಹೊರಡುವಳು)
ಸುಮ ಕುಳಿತು ಪುಸ್ತಕ ಓದುತ್ತಿದ್ದಾಳೆ.
ರಾಕೇಶ್ :  (ಬಂದು ಬ್ಯಾಗ್ ಒಂದು ಕಡೆಸಾಕ್ಸ್ ಒಂದು ಕಡೆ ಶೂ ಒಂದು ಕಡೆ ಹಾಕುತ್ತಾನೆ) ಮಮ್ಮಿ ಟೀ ಬೇಕು. (ಟೀ ಕೊಡುತ್ತಾಳೆ) ತಿನ್ನಲು ಏನಾದರೂ ಕೊಡು. (ಕೊಡುತ್ತಾಳೆ) ನೆನಪಿದೆ ಅಲ್ವಾ ಮಮ್ಮಿ. ನಾಡಿದ್ದು ನಾನು ಟ್ರಿಪ್ ಹೋಗ್ತಾ ಇರೋದು. ಎಲ್ಲಾ ರೆಡಿ ಮಾಡಿಟ್ಟು ಬಿಡು (ಆರ್ಡರ್ ಮಾಡುತ್ತಾನೆ.) ಕಳೆದ ಬಾರಿ ನೀನು ಕರ್ಚೀ¥sóï ಮರೆತುಬಿಟ್ಟಿದ್ದೆ. ಎಷ್ಟು ಕಷ್ಟ ಆಯ್ತು ಗೊತ್ತಾ? (ಆರೋಪಿಸುತ್ತಾನೆ)
ಶೀಲಾ ಮಾತನಾಡುವುದಿಲ್ಲ. ಏನೋ ಯೋಚಿಸುತ್ತಿರುತ್ತಾಳೆ. ಅಷ್ಟರಲ್ಲಿ ರಮ್ಯ ಬರುತ್ತಾಳೆ.
ರಮ್ಯ : (ಟೀ ಕೇಳುತ್ತಾಳೆ. ಕೇವಲ ವ್ಯವಹಾರದಂತೆ ಅಮ್ಮನೊಂದಿಗೆ ಮಾತನಾಡುತ್ತಾಳೆ)
ರಮ್ಯ : ಮಮ್ಮಿ ನಾನು ನಾಡಿದ್ದು ಪಾರ್ಟಿಗೆ ಹೋಗಬೇಕು. ನನ್ನ ಬಟ್ಟೆ ಒಗೆದು ರೆಡಿ ಮಾಡಿಬಿಡು.
ಶೀಲಾ : (ನಿಧಾನವಾಗಿ ಉತ್ತರಿಸುತ್ತಾಳೆ) ಇಲ್ಲ ನನ್ನ ಕೈಲಾಗದು. ರಾಕೇಶ್ ನೀನೇ ಪ್ಯಾಕ್ ಮಾಡಿಕೊ (ಜೋರಾಗಿ ಮಾತನಾಡಲು ಪ್ರಯತ್ನಿಸುತ್ತಾಳೆಆದರೆ ಸಾಧ್ಯವಾಗುವುದಿಲ್ಲ)
ರಾಕೇಶ್ ಮತ್ತು ರಮ್ಯ : (ಇಬ್ಬರೂ ಒಟ್ಟಿಗೇ ಕಿರುಚುತ್ತಾರೆ) ವಾಟ್
ರಾಕೇಶ್ :  ಏನ್ ಮಮ್ಮಿ ಹಾಗೆಂದ್ರೆ?
(ನಿಜವಾದ ಕಾರಣ ಹೇಳೋಣ ಎಂದುಕೊಳ್ಳುತಾಳೆ.  ಆದರೆ ಅವರ ಪ್ರತಿಕ್ರಿಯೆ ನೋಡುತ್ತಾಳೆ
ಶೀಲಾ:  ಇಲ್ಲ ನನಗೆ ಹುಷಾರಿಲ್ಲ
ರಾಕೇಶ್ :  ಏನಾಯ್ತು (ಕಾಳಜಿರಹಿತ ದನಿ)
ಶೀಲಾ : ಯಾಕೋ ತಲೆನೋವು ಅನಿಸುತ್ತೆ.
ರಾಕೇಶ್ :  ಅಷ್ಟೇನಾನಾನೇನೋ ಅಂದ್ಕೊಂಡೆ. ಅಲ್ಲಿ ಮಾತ್ರೆ ಇದೆಯಲ್ಲ. ತೆಗೆದುಕೊ. ನಾಳೆ ಎಲ್ಲಾ ಸರಿಹೋಗುತ್ತೆ.
(ಮಾತ್ರೆಯನ್ನು ಕೊಡುವ ಕಷ್ಟವನ್ನೂ ತೆಗೆದುಕೊಳ್ಳದೆಇಬ್ಬರೂ ತಂತಮ್ಮ ಕೆಲಸಗಳಿಗೆ ಎದ್ದುಹೋಗುವರು)
ಶೀಲಾ. : ನೋವಿನಿಂದ ನಗುತ್ತಾಳೆ
(ತನ್ನ ಮಕ್ಕಳು ಬೇರೆ ದಿನಗಳು ಈ ರೀತಿ ಇದ್ದರೂಹುಷಾರಿಲ್ಲ ಎಂದಾಗಲೂ ಕಾಳಜಿ ವಹಿಸದೇ ಇದ್ದದ್ದನ್ನು ಕಂಡು ಕಣ್ತುಂಬಿ ಬಂತು. ಅವಳಿಗೆ ಸುಮ ಹೇಳಿದ್ದು ಈಗ ಸರಿ ಎನಿಸಿತು. ಅದನ್ನು ಜಾರಿಮಾಡಬೇಕೆಂಬ ತೀರ್ಮಾನ ಗಟ್ಟಿಯಾಯಿತು.)
(ರಾತ್ರಿಯೂ ಸಹ ಅವಳು ಯಾರನ್ನೂ ಊಟಕ್ಕೆ ಕರೆಯಲಿಲ್ಲ. ರೂಮಿನಲ್ಲಿ ಇರುತ್ತಾಳೆ)
ರಾಕೇಶ್ :  ಮಮ್ಮಿ ಊಟ ಬಡಿಸು ಬಾ
ಶೀಲಾ : ಆಗಲ್ಲ ಕಣೋನೀನೇ ಬಡಿಸಿಕೊ.
ರಾಕೇಶ್ :  ತಲೆ ನೋವು ಇನ್ನೂ ಕಡಿಮೆ ಆಗಿಲ್ಲವಾ.
ಶೀಲಾ : ಇಲ್ಲ ಕಣೋ
ರಾಕೇಶ್ :  (ಅಸಹನೆಯಿಂದಲೇ) ಸುಮ್ ಸುಮ್ನೆ ಯವಾಗ್ಲೂ ಆ ಟಿವಿ ಮುಂದೆ ಕೂತಿರ್ತೀಯ. ಅದಕ್ಕೆ ತಲೆನೋವು.
(ಉತ್ತರಿಸಲಿಲ್ಲ ಶೀಲ)
(ಅವನೇ ಏನೋ ಗೊಣಗುತ್ತ ಪಾತ್ರೆಯನ್ನು ಸದ್ದು ಮಾಡತೊಡಗಿದ)
ರಮ್ಯ : (ಅಲ್ಲಿಗೆ ಬಂದವಳು) ಏನೋ ನಿನ್ನ ಗೋಳು.
ರಾಕೇಶ್ : (ಅಮ್ಮನ ಮೇಲೆ ಕಂಪ್ಲೇಂಟ್ ಹೇಳಿದ) ಮತ್ತೆ ನೋಡು ಅಮ್ಮನ್ನ
ರಮ್ಯ : (ಏನು ಹೇಳದೆ) ಆಯ್ತು ಬಾನಾವಿಬ್ಬರು ಊಟ ಮಾಡೋಣ.
ರಾಕೇಶ್ :  ಸರಿ ಬಡಿಸಿಕೊಡು
ರಮ್ಯ : ಯಾಕಪ್ಪ ನಿನಗೆ ಕೈಯಿಲ್ಲವಾ. ನೀನೆ ಬಡಿಸಿಕೊ.
ರಾಕೇಶ್ :  ನೀನು ಹೆಣ್ಣುಮಗಳು.
ರಮ್ಯ : ನಾನು ನಿನ್ನ ತರಾನೆ ದುಡೀತೀನಪ್ಪ. ಅಮ್ಮನ ತರ ನಿನ್ನ ಸೇವೆ ಮಾಡ್ತೀನಿ ಅಂದ್ಕೋಬೇಡ.
(ಶೀಲಾಳಿಗೆ ಕೇಳಿಸಿಕೊಂಡು ಶಾಕ್ ಆಯಿತು. ಅಂದ್ರೆ ಮಗನ ಪ್ರಕಾರ ನಾನು ಹೆಣ್ಣು ಅದಕ್ಕೆ ಕೆಲಸ ಮಾಡಬೇಕು.
ಆದರೆ ಮಗಳ ಪ್ರಕಾರ ನಾನು ಕೆಲಸಕ್ಕೆ ಹೋಗಲ್ಲಅದಕ್ಕೆ ಈ ಕೆಲಸ ಮಾಡಬೇಕು.
ಇವರಿಗೆ ಬುದ್ಧಿ ಕಲಿಸಬೇಕು. ನಮ್ಮ ಕೆಲಸ ಕ್ಷುಲ್ಲಕ ಎನ್ನುವ ಅವರಿಗೆ ಬುದ್ಧಿ ಕಲಿಸಬೇಕು ಎಂದು ತೀರ್ಮಾನಿಸಿದಳು)
*********
(ಬೆಳಿಗ್ಗೆ ಶೀಲಾ ತಾನು ಮಾತ್ರ ಕಾಫಿû ಕುಡಿದು ರೂಮಿನಲ್ಲಿ ಪೇಪರ್ ಓದತೊಡಗಿದಳು)
ರಾಕೇಶ್ : (ಎದ್ದುಬಂದವನೇ) ಅಮ್ಮ ಕಾಫಿû. (ಯಾರೂ ಉತ್ತರಿಸಿಲಿಲ್ಲ. ರೂಮಿಗೆ ಬಂದು ಅಮ್ಮ ಪೇಪರ್ ಓದುತ್ತಾ ಇರೋದನ್ನು ನೋಡಿ) ಎಲ್ಲಮ್ಮ ಕಾಫಿû.
ಶೀಲಾ : ಮಾಡಿಲ್ಲ.
ರಾಕೇಶ್ : ಯಾಕಮ್ಮಇಷ್ಟೊತ್ತಾಗಿದೆ.
ಶೀಲಾ : ಇವತ್ತು ಭಾನುವಾರ.
ರಾಕೇಶ್ :  ಹೌದುಅದಕ್ಕೆ
ಶೀಲಾ : ಇವತ್ತು ರಜ
ರಾಕೇಶ್ :  ಯಾರಿಗೆನಿನಗಾ?
ಶೀಲಾ : ಹೌದು ನನಗೇ.
ರಾಕೇಶ್ :  ಏನಮ್ಮ ಇದುತಮಾಷೇನಾಎದ್ದು ಕಾಫಿû ಮಾಡಿಕೊಡು ಬಾ.
ಶೀಲಾ : ಇಲ್ಲ ಕಣೊ ನೆನ್ನೇನೆ ನಿಮಗೆ ಹೇಳಬೇಕಿತ್ತು. ಆದ್ರೆ ಹೇಳಲು ಕಷ್ಟ ಆಯ್ತು. ಆದ್ರೆ ನಿಮ್ಮ ವರ್ತನೆ ನೋಡಿದ ಮೇಲೆ ಈಗ ಹೇಳ್ತಾ ಇದ್ದೀನಿ.
ರಾಕೇಶ್ :  ರಮ್ಯಾ ಬಾ ಇಲ್ಲಿ (ಏನೋ ಆದವನಂತೆ ಕಿರುಚಿದ)
ರಮ್ಯಾ : (ನಿದ್ದೆಗಣ್ಣಲ್ಲಿ ಎದ್ದು ಬಂದ ಅವಳು) ಏನೋ ಅದುನಿದ್ದೆ ಹಾಳುಮಾಡಿದೆ.
ರಾಕೇಶ್ :  ಇಲ್ಲಿ ಕೇಳು ನಿಮ್ಮಮ್ಮನ ಮಾತು.
ರಮ್ಯ : ಮತ್ತೇನೋ ಇವತ್ತು?
ರಾಕೇಶ್ :  ಇವತ್ತು ಭಾನುವಾರ ಅಂತೆಅವಳಿಗೆ ರಜ ಅಂತೆಏನೂ ಕೆಲಸ ಮಾಡುವುದಿಲ್ಲವಂತೆ.
ರಮ್ಯ : ಹಾ (ರಮ್ಯಾಳ ನಿದ್ದೆ  ಓಡಿಹೋಯಿತು)
ರಮ್ಯ : ಹೌದೇನಮ್ಮ?
ಶೀಲಾ : ಹೌದು. ನಿಮಗೆಲ್ಲ ವಾರಕ್ಕೊಂದು ದಿನ ರಜ ಸಿಗುವುದಿಲ್ಲವೇ ಹಾಗೆ ನನಗೂ ರಜೆ ಬೇಡ್ವಾ?
ರಾಕೇಶ್: ಏನು ಮಹಾ ಕೆಲಸ ನೀವು ಮಾಡೋದು. ಬೆಳಿಗ್ಗೆ ಒಂದರ್ಧ ಘಂಟೆಮಧ್ಯಾಹ್ನ ಒಂದರ್ಧ ಘಂಟೆ ರಾತ್ರಿ ಒಂದರ್ಧ ಘಂಟೆ. ಮನೆಗೆಲಸಕ್ಕೆ ಕಲಾ ಬರ್ತಾಳೆ.
ರಮ್ಯಾ: ಅವನು ಹೇಳೋದು ನಿಜ ಅಲ್ವೇನಮ್ಮ?
ಶೀಲಾ : ಹೌದಾಹಾಗಿದ್ದರೆ ಇವತ್ತು ಆ ಅರ್ಧ ಘಂಟೆ ಕೆಲಸ ನೀವೆ ಮಾಡಿದ್ರೆ ನಿಮಗೂ ಗೊತ್ತಾಗುತ್ತೆ.
ರಮ್ಯ : ಅದೇನು ಮಹಾ. ತೋರಿಸಿಯೇ ಬಿಡ್ತೀವಿ. ಬಾರೋ ಅದೇನು ಮಹಾ ಕೆಲಸ. ಇಬ್ಬರೂ ಸೇರಿ ಮಾಡಿಬಿಡೋಣ.
ರಾಕೇಶ್ : ಇಲ್ಲಮ್ಮ ನನ್ ಕೈಲಾಗಲ್ಲ. ನಾನು ಗಿರಿ ಮೂವಿಗೆ ಹೋಗಬೇಕು ಅಂದ್ಕೊಂಡಿದ್ದೀವಿ.
ರಮ್ಯಾ: ಅದೆಲ್ಲ ನಂಗೊತ್ತಿಲ್ಲ. ನೀನು ಬಂದು ಮಾಡಿದ್ರೆ ನಾನು ಮಾಡ್ತೀನಿ. ಇಲ್ಲದಿದ್ದ್ರೆ ಇಲ್ಲ. ಈಗ ಕಾಫಿû ಬೇಕೊ ಬೇಡ್ವೊ.
ರಾಕೇಶ್: ಕಾಫಿû ಬೇಕೇ ಬೇಕು.
ರಮ್ಯಾ: ಕಾಫಿû ಬೇಕು ಅಂದ್ರೆ ಬೇರೆ ಕೆಲಸ ಮಾಡಿಕೊಡು ಬಾ.
ರಾಕೇಶ್ : ಸರಿ ನಡಿ. (ತಾಯಿಯತ್ತ ತಿರುಗಿದವನು) ಮತ್ತೆ ನೀನು ತಿನ್ನಲ್ವಾ?
ಶೀಲಾ : (ಮಗ ಕೇಳಿದ ಪ್ರಶ್ನೆಗೆ ಬೇಸರಿಸಿದಳು. ನೋವಾದರೂ ಗಟ್ಟಿಯಾಗಿ) ಯಾಕೆ ನಾನು ಮಾಡಿದಾಗ ನೀವು ತಿನ್ನಲ್ವಾಹಾಗೆ ಇದೂನು. ಆದ್ರೂ ನನ್ನ ಬಗ್ಗೆ ನೀವೇನೂ ಯೋಚನೆ ಮಾಡಬೇಡಿ.
ರಾಕೇಶ್ :  ಹೋಗಲಿ ನನ್ನ ಪ್ಯಾಕಿಂಗ್?
ಶೀಲಾ : ಇಲ್ಲ ಇವತ್ತಿನಿಂದ ಈ ಎಕ್ಸ್ಟ್ರಾ ಕೆಲಸ ನಾನು ಮಾಡೋಲ್ಲ. ನಿಮ್ಮಂತೆ ನನಗೂ ಘಂಟೆ ಕೆಲಸ. 10ರಿಂದ 5. ಆದ್ರೆ ನೀವು ಕೆಲಸಕ್ಕೆ ಹೋಗಬೇಕಾಗಿರೋದ್ರಿಂದ ಅಯ್ಯೊ ಪಾಪ ಅಂತ ರಿಂದ 4.
ರಮ್ಯ : (ಗಾಬರಿಯಿಂದ) ಮತ್ತೆ ರಾತ್ರಿ ಅಡಿಗೆ?
ಶೀಲಾ : ಅದನ್ನು ನೀವು ಮಾಡಬೇಕು.
ರಮ್ಯ : ಮಮ್ಮಿ ನಿನಗೆ ನಿಜವಾಗಲೂ ಏನೋ ಆಗಿದೆ
ರಾಕೇಶ್ :  ಸುಮ ಆಂಟಿ ಬಂದಿದ್ರಾಅವರು ಬಂದು ಹೋದಾಗಲೆಲ್ಲಈ ರೀತಿ ಏನೋ ಆಗುತ್ತೆ. ಅದಕ್ಕೆ ಹೀಗೆ ಆಡ್ತಾ ಇದ್ದಾರೆ ಮಮ್ಮಿ.
ಶೀಲಾ : ನನ್ನ ಗೆಳತಿಯನ್ನು ಏನೂ ಅನ್ನಬೇಡ. ಆ ಅಧಿಕಾರ ನಿನಗಿಲ್ಲ (ಗಟ್ಟಿಯಾಗಿ ಹೇಳಿದಳು. ಯಾವಾಗಲೂ ಸುಮಳನ್ನು ತಮಾಷೆ ಮಾಡುತ್ತಿದ್ದ ರಾಕೇಶ್ ಅವಳ ದನಿಯಲ್ಲಿನ ಗಟ್ಟಿತನ ಕೇಳಿ ದಂಗಾಗಿ ಸುಮ್ಮನಾಗಿಬಿಟ್ಟ)
(ಬೆಳಿಗ್ಗೆಯಿಡೀ ತಿಂಡಿ ಮಾಡುವುದರಲ್ಲಿ ಕಾಲ ಕಳೆದುಹೋಗುತ್ತೆ. ಅಡುಗೆಮನೆಯಲ್ಲಿ ಪಾತ್ರೆ ಶಬ್ದಇಬ್ಬರೂ ಜಗಳವಾಡುತ್ತಿರುವ ಶಬ್ದ ಕೇಳಿಬರುತ್ತೆ. ಮಧ್ಯಾಹ್ನ ಏನೋ ಹೊರಗಡೆಯಿಂದ ತಂದುಕೊಳ್ಳುತ್ತಾರೆ.)
(ಸಂಜೆ 4ಕ್ಕೆ ಶೀಲಾಳ ಗಂಡ ಸುಧೀರ್ ಬರುತ್ತಾನೆ. ಬಂದ ತಕ್ಷಣವೇ ಕಾಫಿಯನ್ನೂ ಕೊಡದೆ ಕಂಪ್ಲೇಂಟ್ ಹೇಳುತ್ತಾರೆ)
ರಾಕೇಶ್ : ಅಪ್ಪ ನಿನಗೊಂದು ಸಂತಸದ ಸುದ್ದಿ(ವ್ಯಂಗ್ಯವಾಗಿ) ಇನ್ನು ಮುಂದೆ ತಮ್ಮ ಶ್ರೀಮತಿಯವರು ಭಾನುವಾರ ಕೆಲಸ ಮಾಡುವುದಿಲ್ಲವಂತೆ.
ರಮ್ಯಾ: (ಜೊತೆಗೆ) ಪ್ರತಿದಿನ ಘಂಟೆ ಮಾತ್ರ ಕೆಲಸ ಮಾಡುತ್ತಾಳಂತೆ. ರಾತ್ರಿ ಅಡುಗೆ ನಾವು ಮೂವರು ಮಾಡಬೇಕಂತೆ.
ಸುಧೀರ್ : (ಹಾಸ್ಯ ಎಂದುಕೊಂಡು) ಏನಿವತ್ತುಎಲ್ಲರೂ ನನ್ನನ್ನು ಫೂಲ್ ಮಾಡಲು ಹೊರಟಿದ್ದೀರಾಇನ್ನು ಏಪ್ರಿಲ್ ಬಂದಿಲ್ಲವಲ್ಲ?
ರಮ್ಯ : ಅಪ್ಪ ನಾವು ನಿನಗೆ ಸೀರಿಯಸ್ಸಾಗಿ ಹೇಳುತ್ತಿದ್ದರೆನಿನಗೆ ಹಾಸ್ಯದ ತರ ಕಾಣುತ್ತಿದೆಯಾ?
ಸುಧೀರ್: (ಶಾಕ್ ನಿಂದ) ಏನು?
ರಾಕೇಶ್ : ಹೂನಪ್ಪನಿಜ ಇದು. ಬೆಳಿಗ್ಗೆಯಿಂದಲೂ ಇದೇ ವಾದ. ನೋಡು ನಮ್ಮಿಬ್ಬರನ್ನ. ಬೆಳಿಗ್ಗೆಯಿಂದ ನಾವೇ ತಿಂಡಿಕಾಫಿû ಮಾಡಿದ್ದು.
ಸುಧೀರ್ : ಶೀಲಾಗೆ ಏನಾಯ್ತುಹುಷಾರಿಲ್ಲವಾಎಲ್ಲಿ ಶೀಲಾ?
ರಮ್ಯಾ : ಬೆಳಿಗ್ಗೆಯಿಂದಲೂ ರೂಮಿನಿಂದ ಹೊರಬಂದಿಲ್ಲ. ಏನೋ ಓದುತ್ತಾ ಬರೆಯುತ್ತಿದ್ದಾಳೆ. ನಾವು ಇಷ್ಟು ಒದ್ದಾಡ್ತಾ ಇದ್ದರೂಒಂದು ಬಾರಿಯೂ ಹೊರಬರಲಿಲ್ಲ ಗೊತ್ತಾ?
ಸುಧೀರ್ : ಶೀಲಾ (ಎನ್ನುತ್ತಾ ರೂಮಿಗೆ ಹೋಗಬೇಕೆನ್ನುವಷ್ಟರಲ್ಲಿಶೀಲಾ ರೂಮಿನಿಂದ ಹೊರಬರುತ್ತಾಳೆ)
ಶೀಲಾ : ಎಷ್ಟೊತ್ತಾಯ್ತು ಬಂದುರಮ್ಯಾರಾಕೇಶ್ ಅಪ್ಪನಿಗೆ ಕಾಫಿû ಕೊಟ್ಟಿರಾ?
ಸುಧೀರ್: (ಶಾಕ್ ತಿಂದವನಂತೆ) ಅದೇನು ಅವರಿಗೆ ಹೇಳುತ್ತಿದ್ದೀಯಾನಾವು ಅಷ್ಟೊತ್ತಿಂದ ಮಾತನಾಡುತ್ತಿರುವುದು ನಿನಗೆ ಕೇಳಿಸಲಿಲ್ಲವೇ?
ಶೀಲಾ: ಇಲ್ಲ ನಾನೇನೋ ಬರವಣಿಗೆಯಲ್ಲಿ ತೊಡಗಿದ್ದೆ. ಅಷ್ಟೊತ್ತಿಂದ ಮಾತನಾಡುತ್ತಿದ್ದಿರಿ ಎಂದರೆ ಅವರು ಈಗಾಗಲೇ ನಿಮಗೆ ಎಲ್ಲವನ್ನೂ ಹೇಳಿರಬೇಕಲ್ಲವೇ?
ಸುಧೀರ್ : ಏನಿದೆಲ್ಲ ಶೀಲಾನಿನಗೆ ಹುಷಾರಿಲ್ಲದಿದ್ದರೆ ಒಂದೆರಡು ದಿನ ರೆಸ್ಟ್ ತೆಗೆದುಕೊ. ಅದು ಬಿಟ್ಟು (ಅನುನಯದ ದನಿಯಲ್ಲಿ ಹೇಳುತ್ತಾನೆ)
ಶೀಲಾ : ಇಲ್ಲ ಸುಧೀರ್. ಅವರು ಹೇಳಿದ್ದೆಲ್ಲ ಸತ್ಯ. ಇನ್ನು ಮುಂದೆ ಹಾಗೆಯೇ. ನನಗೂ ಸಹ 25 ವರ್ಷಗಳಿಂದಲೂ ಈ ಕೆಲಸ ಮಾಡಿ ಮಾಡಿ ಸಾಕಾಗಿದೆ.
ಸುಧೀರ್ : ಅರೆನಾವು ಮೂವರು ಹೊರಗೆ ಹೋಗಿ ದುಡಿಯುತ್ತೇವೆ. ನೀನು ಮನೆಯಲ್ಲಿರುವವಳುನಿನಗೆ ಇದನ್ನು ಬಿಟ್ಟರೆ ಬೇರೇನು ಕೆಲಸವಿದೆ ಹೇಳು.
ಶೀಲಾ: ಸುಧೀರ್ನೀವು ದಿನಕ್ಕೆ ಘಂಟೆ ಮಾತ್ರ ದುಡಿಯುತ್ತೀರಿ. ಆದರೆ ನಾನು. ಬೆಳಿಗ್ಗೆ ಘಂಟೆಯಿಂದ ರಾತ್ರಿ 11ರವರೆಗೆ ಕೆಲಸ ಮಾಡುತ್ತಲೇ ಇರುತ್ತೇನೆ.
ರಾಕೇಶ್ : ಘಂಟೆಗೆ ಏಳುತ್ತೀಯಾ. ಒಪ್ಪಿಕೊಳ್ಳುತ್ತೇನೆಆದರೆ 11 ಆದ ಮೇಲೆ ಏನು ಕೆಲಸವಿದೆ. ಕಲಾ ಬಂದು ಮನೆ ಕ್ಲೀನ್ ಮಾಡಿಕೊಳ್ಳುತ್ತಾಳೆ.
ರಮ್ಯಾ : ಬಟ್ಟೆ ವಾಷಿಂಗ್ ಮೆಷಿನ್ ಗೆ ಹಾಕುತ್ತೀಯಾ.
ಶೀಲಾ: ಹೌದಮ್ಮಅದಾದ ಮೇಲೆ ಅದಷ್ಟಕ್ಕೆ ಅದು ಒಣಗುವುದಿಲ್ಲಮಡಿಚಿಕೊಂಡು ಅಲ್ಮೀರಾದಲ್ಲಿ ಕುಳಿತುಕೊಳ್ಳುವುದಿಲ್ಲಐರನ್ ಆಗುವುದಿಲ್ಲ. ಅದೆಲ್ಲ ನಾನೇ ಮಾಡಬೇಕು. ಇದಕ್ಕೆಲ್ಲ ಸಮಯ ಎಷ್ಟಾಗುತ್ತೆ ಯೋಚನೆ ಮಾಡಿದ್ದೀರಾ?
ಸುಧೀರ್ : ಮನೆಗೆ ಸಂಪಾದನೆ ಮಾಡಿಕೊಂಡು ಬರಬೇಕಾದರೆ ನಾನು ಹೊರ ಹೋಗಬೇಕು. ಅದರ ಜೊತೆ ಇಲ್ಲೂ ಮಾಡಬೇಕು ಎಂದರೆ?
ಶೀಲಾ: ನಾವು ಮನೆಯಲ್ಲಿ ಮಾಡುತ್ತಿರುವ ಕೆಲಸಗಳಿಗೆ ಪಟ್ಟಿ ಮಾಡಿ. ನೆನಪಿದೆಯಾ ನಿಮಗೆನಾನು ಒಂದು ತಿಂಗಳು ಅಮ್ಮನ ಮನೆಗೆ ಹೋಗಿದ್ದಾಗನೀವು ಅಡಿಗೆ ಮಾಡಲು ಬಂದ ಸಾವಿತ್ರಿಗೆ 5000 ಕೊಟ್ಟಿರಿ. ಅದೂ ಬೆಳಿಗ್ಗೆ ಮತ್ತು ರಾತ್ರಿಗೆ ಮಾತ್ರ. ಆಮೇಲೆ ಕಂಪ್ಲೇಂಟ್ ಹೇಳಿದ್ದು ಮರೆತುಹೋಯಿತೆ. ದಿನಾ ಅದನ್ನೇ ಬೇಯಿಸಿ ಹಾಕುತ್ತಿದ್ದಳು ಎಂದು. ಕಲಾಗೆ ನಾವು 2000 ರೂ ಕೊಡುತ್ತಿದ್ದೇವೆ. ಅವಳು ಕೆಲಸ ಮಾಡುವುದು ಬರಿ ಮುಕ್ಕಾಲು ಘಂಟೆ. ಪ್ರತಿಯೊಂದಕ್ಕೂ ಹೀಗೆ ಲೆಕ್ಕ ಮಾಡಿದರೆ ಎಷ್ಟು ಕೊಡಬೇಕು ನೀವೇ ಯೋಚನೆ ಮಾಡಿ.
ರಾಕೇಶ್ : ಏನಮ್ಮ ಹೀಗೆಲ್ಲ ಲೆಕ್ಕಾಚಾರ ಮಾಡುತ್ತಿದ್ದೀಯಾ?
ಶೀಲಾ: ಮತ್ತೆ ನೀವುಗಳು ನಾನೇನು ಮಾಡುತ್ತಿದ್ದೀನಿ ಅಂತ ಕೇಳಿದರೆ ಲೆಕ್ಕ ಒಪ್ಪಿಸಬೇಕಲ್ಲವಾ?
ಸುಧೀರ್ : ಅಂದ್ರೆ ಏನೀಗನಿನಗೆ ಸಂಬಳ ಕೊಡಬೇಕು ಅಂತಲೇನಿನಗೆ ಬೇಕಾದ್ದನ್ನೆಲ್ಲ ನಾನೇ ತಂದುಕೊಡುತ್ತೀನಲ್ಲವಾ?
ಶೀಲಾ: ಇನ್ನು ಮುಂದೆ ಆ ಪರಿಸ್ಥಿತಿಯೂ ಬರಬಹುದು. ತಂದುಕೊಡುತ್ತೀರಾಇಲ್ಲ ಎಂದು ನಾನು ಹೇಳಿಲ್ಲ. ನನಗೆ ನೀವು ಯಾವುದಕ್ಕೂ ಕೊರತೆ ಮಾಡಿಲ್ಲ (ಹೆಮ್ಮೆಯಿಂದ ನಗುತ್ತಾನೆ) ಆದರೆ ನಿಮಗೆ ಬೇಕನಿಸಿದ್ದುನಿಮಗೆ ಸಮಯವಾದಾಗ. ನನಗೆ ಬೇಕೆನಿಸಿದ್ದನ್ನು ಎಷ್ಟು ಬಾರಿ ನೀವು ತಿರಸ್ಕರಿಸಿದ್ದೀರಿನೆನಪಿಸಿಕೊಳ್ಳಿ ( ಮುಖ ಬಾಡುತ್ತದೆ)
ಸುಧೀರ್ : (ನಿಧಾನವಾಗಿ) ಹೌದುಅದು ನಿಜಆದರೆ ಕೆಲಸದ ಅವಸರದಲ್ಲಿ... ...
ಶೀಲಾ: ನಿಮಗಾದರೆ ಕೆಲಸಗಳಿರುತ್ತೆ. ಆದರೆ ನಾನೇನಾದರೂ ನಿಮ್ಮಗಳ ಒಂದು ಕೆಲಸ ಮಾಡದಿದ್ದರೆ ಆಕಾಶ ಭೂಮಿ ಒಂದು ಮಾಡುವಂತೆ ಕೂಗಾಡುತ್ತೀರಾ?
ಸುಧೀರ್ : ಸರಿ ಈಗ ಏನು ಮಾಡುಬೇಕು ಹೇಳು
ಶೀಲಾ: ಪ್ರತಿ ಭಾನುವಾರ ನನಗೂ ರಜ ಬೇಕು. ಅವತ್ತು ನೀವುಗಳು ಸೇರಿ ಮನೆ ಕೆಲಸ ಮಾಡಬೇಕು. ಉಳಿದ ದಿನಗಳು ರಾತ್ರಿ ನೀವುಗಳು ನೆರವಿಗೆ ಬಂದರೆ ಅಡುಗೆ ಮಾಡುತ್ತೇನೆ. ಇಲ್ಲದಿದ್ದರೆ ಇಲ್ಲ.
ರಾಕೇಶ್ : ಅಪ್ಪನೆನ್ನೆ ಸುಮ ಆಂಟಿ ಬಂದಿದ್ದಾರೆ. ಅವರೇ ಅಮ್ಮನ ತಲೆಗೆ ಏನೋ ತುಂಬಿ ಹೋಗಿದ್ದಾರೆ.
ಶೀಲಾ: ಅವಳ ಬಗ್ಗೆ ಯಾಕೆ ಮಾತಾಡ್ತೀಯಾಆ ಅಧಿಕಾರ ನಿನಗೆ ಯಾರೂ ಕೊಟ್ಟಿಲ್ಲ. ಅವಳ ಮನೆಯಲ್ಲಿ ನೋಡು ಪ್ರತಿ ಭಾನುವಾರ ಸಂಜಯ್ಸಂಜನಾಸುರೇಶ್ ಸೇರಿ ಅಡುಗೆ ಮಾಡುತ್ತಾರೆ. ಅವಳಿಗೆ ಎಲ್ಲ ಕೆಲಸಗಳಲ್ಲಿ ಸಹಾಯ ಮಾಡುತ್ತಾರೆ. ಒಟ್ಟಿಗೆ ಹೊರಹೋಗುತ್ತಾರೆ.
ರಾಕೇಶ್ : ಆ ಸಂಜಯ್ ಗೆ ಮಾಡಲು ಬೇರೆ ಕೆಲಸವಿಲ್ಲ. ಯಾರೂ ಗೆಳೆಯರಿಲ್ಲ. ಯಾವಾಗ್ಲೂ ಅಮ್ಮನ ಸೆರಗನ್ನೇ ಹಿಡಿದುಕೊಂಡು ಓಡಾಡ್ತಾನೆ.
ಶೀಲಾ: ರಾಕೇಶ್ಅವನ ಬಗ್ಗೆ ಮಾತನಾಡಬೇಡ. ಅವನ ಬಗ್ಗೆ ಮಾತನಾಡಲು ನಿನಗೆ ಯೋಗ್ಯತೆ ಏನಿದೆ?
ರಾಕೇಶ್: (ಶೀಲಾ ಆ ರೀತಿ ಹೇಳಿದ್ದಕ್ಕೆ ಬೇಜಾರು ಮಾಡಿಕೊಳ್ತಾನೆ) ನೋಡಪ್ಪ.
ಶೀಲಾ : (ಸುಧೀರ್ ಮಾತನಾಡುವ ಮೊದಲೇ) ಅವರಿಗೆ ಯಾಕೆ ಹೇಳ್ತೀಯಾ. ನೀನೇ ಯೋಚನೆ ಮಾಡಿ ನೋಡು. ಸಂಜಯ್ ಬಿಟ್ಟುಬಿಡು. ನಿನ್ನ ಗೆಳೆಯ ಗಿರಿ ಇದ್ದಾನಲ್ಲಅವನನ್ನೇ ಕೇಳಿ ನೋಡುಅವನ ಅಮ್ಮನಿಗೆ ಸಹಾಯ ಮಾಡ್ತಾನೋ ಇಲ್ಲವೋ ಅಂತ.
ರಾಕೇಶ್: (ನಿಧಾನವಾಗಿ) ಮಾಡ್ತಾನೆ.
ಶೀಲಾ : ಇದರ ಜೊತೆ ಇನ್ನು ಮುಂದೆ ಕೆಲವು ಕಂಡೀಷನ್ಸ್ ಇದೆ. ಸುಧೀರ್ ನೀವು ಸಂಜೆ ಹೊತ್ತು ಕ್ಲಬ್‍ಗೆ ಹೋಗೊ ಬದಲು ನನ್ನೊಂದಿಗೆ ವಾಕ್ ಬರಬೇಕು. ಇಲ್ಲದಿದ್ದರೆ ನಾನು ಸುಮಳ ಜೊತೆ ವಾಕಿಂಗ್ ಹೋಗ್ತೀನಿ. ನಿಮ್ಮ ಕಾಫಿû ನೀವೆ ಮಾಡಿಕೊಳ್ಳಬೇಕು. ಭಾನುವಾರ ಎಲ್ಲರೂ ಜೊತೆಯಲ್ಲಿ ಎಲ್ಲಿಗಾದರೂ ಹೋಗಬೇಕು. ನನ್ನನ್ನು ಮಾತ್ರ ಒಂಟಿ ಪಿಶಾಚಿಯನ್ನಾಗಿ ಬಿಟ್ಟುನೀವುಗಳು ಮಾತ್ರ ನಿಮ್ಮ ಕಾರ್ಯಕ್ರಮಗಳನ್ನು ಫಿûಕ್ಸ್ ಮಾಡಿಕೊಳ್ಳೂದು ಏನೂ ಚೆನ್ನಾಗಿಲ್ಲ.
ರಮ್ಯಾ : ಆದರೆ ನಮ್ಮ ಸ್ನೇಹಿತರ ಮನೆಯಲ್ಲಿ  ಫಂಕ್ಶನ್ ಇದ್ದರೆ?
ಶೀಲಾ: ಆಗ ನೀವು ಹೋಗಬಹುದು. ಹಾ. ಇನ್ನು ಮುಂದೆ ನಾನೂ ಸಹ ಸುಮಳ ಜೊತೆ ಅವರ ವೇದಿಕೆಗೆ ಸೇರಿಕೊಳ್ತಾ ಇದ್ದೀನಿ.
(ಎಲ್ಲರೂ ಮೌನವಾಗಿಬಿಡುತ್ತಾರೆ. ಹಾಗೆಯೇ ಸ್ವಲ್ಪ ಸಮಯ ಕಳೆಯುತ್ತದೆ.)
ಸುಧೀರ್ : ಶೀಲಾ ಏನಾಯ್ತು ನಿನಗೆ. ಯಾವಾಗಲೂ ಇಲ್ಲದ್ದು ಇದೇನು ಹೊಸದು. ಮಕ್ಕಳನ್ನು ನೋಡು. ಹೇಗೆ ಬೇಜಾರು ಮಾಡಿಕೊಂಡಿದ್ದಾರೆ.
ಶೀಲಾ : ಅವರ ಬಗ್ಗೆ ಹೇಳಿದಿರಿ. ನಿಮ್ಮ ಬಗ್ಗೆ ಹೇಳುತ್ತೀರಿ. ನನ್ನ ಅಭಿಪ್ರಾಯ ಯಾವಾಗಲಾದರೂ ಕೇಳಿದ್ದೀರಾನಾನೂ ಒಬ್ಬ ಮನುಷ್ಯಳು. ನೀವೆಲ್ಲರೂ ನಿಮ್ಮ ಪಾಡಿಗೆ ನೀವಿದ್ದರೆ ನನ್ನ ಕತೆ ಏನು ಹೇಳಿ. ನನಗೆ ಹೊರಗೆ ಹೋಗಲು ಅವಕಾಶವಿದೆಯೇಸ್ನೇಹಿತರ ಜೊತೆ ಬೆರೆಯಲುನನಗಿಷ್ಟ ಬಂದ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು. ನೀವು ಬಂದವರು ನನ್ನೊಂದಿಗೆ ಮಾತನಾಡುತೀರಾಮಕ್ಕಳು ಮಾತಾಡುತ್ತಾರಾ. ನಿಮ್ಮ ನಿಮ್ಮ ಪ್ರಪಂಚದಲ್ಲಿ ನೀವಿರುತ್ತೀರಿ. ನಾನೇನು ಹಾಗಾದರೆನಿಮ್ಮ ಮನೆಯ ಆಳೇನಿಮಗೆ ಎಲ್ಲಾ ಸೇವೆ ಸೌಲಭ್ಯಗಳನ್ನು ಒದಗಿಸಲು. (ನೋವಿನಿಂದಲೇ ನುಡಿಯುತ್ತಾಳೆ) ಅದೇ ಸುರೇಶ್ ಅವರನ್ನು ನೋಡಿ. ಅವರೂ ಸಹ ನಿಮ್ಮ ಜೊತೆಯೇ ತಾನೇ ಕೆಲಸ ಮಾಡುತ್ತಿರುವುದು. ಸುಮಳ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೆತಿಂಗಳಿಗೊಂದು ಬಾರಿಯಾದರೂ ಎಲ್ಲರೂ ಒಟ್ಟಿಗೆ ಹೊರ ಹೋಗುತ್ತಾರೆ. ಸಂಜಯ್ಸಂಜನಾನ ನೋಡಿದರೆ ಎಷ್ಟು ಖುಷಿ ಆಗುತ್ತೆ. ನನ್ನ ಮಕ್ಕಳು ಆ ರೀತಿ ನನ್ನ ಜೊತೆ ಇರಬೇಕೆಂದು ಆಶಿಸುವುದರಲ್ಲಿ ತಪ್ಪೇನಿದೆ. ನೀವೇ ಹೇಳಿ?
(ಸುಧೀರ್ ಮೌನವಾಗಿ ಕುಳಿತುಕೊಳ್ಳುತ್ತಾನೆ.)
(ಶೀಲ ನೋವಿನಿಂದಲೇ ರೂಮಿಗೆ ಹೋಗುತ್ತಾಳೆ)
ಶೀಲಾ : (ಅಪ್ಪ ಮಕ್ಕಳು ಹಾಲ್‍ನಲ್ಲಿಯೇ ಇರುತ್ತಾರೆ. ಬಹಳ ಹೊತ್ತಾದರೂ ಸುಧೀರ್ ರೂಮಿಗೆ ಬರದಿರುವುದು ಕಂಡು) (ಸ್ವಗತದಲ್ಲಿ)  ಇವರು ಬದಲಾಗುವುದೇ ಇಲ್ಲವೇನೊ  (ನೋವಿನಿಂದಲೇ ನಿದ್ರೆಗೆ ಜಾರುತ್ತಾಳೆ)
(ಬೆಳಿಗ್ಗೆ ಎದ್ದು ಹೊರಗೆ ಹಾಲ್‍ಗೆ ಬಂದರೆ ತಕ್ಷಣ ಶಾಕ್ ಆಗುತ್ತದೆ.
ರೂಮ್ ಅಲಂಕೃತಗೊಂಡಿದೆ. ಅಲ್ಲೊಂದೆಡೆ ದೊಡ್ಡದಾಗಿ ಹ್ಯಾಪಿ ವುಮೆನ್ಸ್ ಡೇ ಮಮ್ಮಿ” ಎಂದೂ ಇನ್ನೊಂದೆಡೆ ಹ್ಯಾಪಿ ವುಮೆನ್ಸ್ ಡೇ ಶೀಲ” ಎಂದು ಬರೆದಿರುವ ಪೋಸ್ಟರ್ ಇರುತ್ತದೆ. ಓಹ್ ಮಸ್ಕಾ ಹೊಡೆಯಲು ಎಂದುಕೊಂಡು ಕಾಫಿû ಇಡಲು ಹೋಗುತ್ತಾಳೆ
ರಾಕೇಶ್: ಗುಡ್ ಮಾರ್ನಿಂಗ್ ಮಮ್ಮಿಕಾಫಿû ರೆಡಿ. (ಕೊಡುತ್ತಾನೆ. ಆಶ್ಚರ್ಯವಾಗುತ್ತದೆ) ಹ್ಯಾಪಿ ವುಮೆನ್ಸ್ ಡೇ.
ಸುಧೀರ್: ಇಗೊ ನಿನ್ನ ಪೇಪರ್ (ಜೊತೆಗೆ ಒಂದು ಹೂಗುಚ್ಛವನ್ನೂ ಸಹ) ಹ್ಯಾಪಿ ವುಮೆನ್ಸ್ ಡೇ
ರಮ್ಯ : ಅಮ್ಮ ಹ್ಯಾಪಿ ವುಮೆನ್ಸ್ ಡೇ. ಬೇಗ ರೆಡಿ ಆಗಿ ಬಾ. ನಾನಿವತ್ತು ತಿಂಡಿ ಮಾಡ್ತಾ ಇದ್ದೀನಿ. ಇವತ್ತು ಪೂರ್ತಿ ನಿನಗೆ ರೆಸ್ಟ್.
ಶೀಲಾ : ಹ್ಯಾಪಿ ವುಮೆನ್ಸ್ ಡೇ. ಏನು ಮಸ್ಕಾನಾಪ್ರತಿ ಬಾರಿ ನೀವು ಹೇಳಿದ್ದನ್ನು ಕೇಳಿಬಿಡುತ್ತಿದ್ದೆ. ಈ ಬಾರಿ ಮಾತ್ರ ನೀವೇನೆ ಮಸ್ಕಾ ಹೊಡೆದ್ರೂ ನನ್ನ ನಿರ್ಧಾರ ಬದಲಾಗಲ್ಲ.
ರಾಕೇಶ್ :  ಇಲ್ಲ ಮಮ್ಮಿ ನೀನು ಹೇಳಿದ್ದನ್ನು ನಾವು ಮೂವರು ರಾತ್ರಿಯೆಲ್ಲ ಕುಳಿತು ಚರ್ಚಿಸಿದೆವು. ನೀನು ಹೇಳಿದ್ದು ಕರೆಕ್ಟ್ ಮಮ್ಮಿ. ನಿನ್ನ ಕೆಲಸ ನಾವು ಮೂವರು ಸೇರಿ ಸಹ ನೆನ್ನೆ ಮಾಡಲಾಗಲಿಲ್ಲ. ಆದರೂ ನೀನು ಇಷ್ಟು ವರ್ಷಗಳು ಏನೂ ಹೇಳದೆ ಮಾಡಿದ್ದೀಯ. ಅದರ ಬೆಲೆ ನೆನ್ನೆಯೇ ನಮಗೆ ಅರಿವಾಗಿದ್ದು. ವೀ ಆರ್ ಸಾರಿ. ಇನ್ನು ಮುಂದೆ ಹೀಗಾಗಲ್ಲ. ನಾವೆಲ್ಲರೂ ನಿನಗೆ ಹೆಲ್ಪ್ ಮಾಡುತ್ತೇವೆ.
ರಮ್ಯಾ : ಹೌದು ಅಮ್ಮ. (ಕಿವಿ ಹಿಡಿದುಕೊಂಡು) ಸಾರಿ. ಈ ಬಾರಿ ಕ್ಷಮಿಸಿಬಿಡು. ಇನ್ನು ಮುಂದೆ ಹೀಗಾಗೋಲ್ಲ. ಸುಮ ಆಂಟಿ ಮಾತ್ರ ಅವರ ಮಕ್ಕಳ ಬಗ್ಗೆ ಯಾಕೆ ಹೆಮ್ಮೆ ಪಡಬೇಕು. ನೀನು ಪಡಬಹುದು. ನೋಡು ಹಾಗೆ ನಿನ್ನನ್ನು ನೋಡಿಕೊಳ್ತೇವೆ.
ಸುಧೀರ್ : ಶೀಲಾಇಷ್ಟು ವರ್ಷಗಳು ನಾನು ನಿನ್ನನ್ನು ಸರಿಯಾಗಿ ಅರ್ಥ ಮಾಡಿಕೊಂಡಿರಲಿಲ್ಲ. ಹೆಂಡತಿಗೆ ಬೇಕಾದ್ದನ್ನು ಕೊಡಿಸಿಬಿಟ್ಟರೆ ಒಳ್ಳೆಯ ಗಂಡ ಎಂದುಕೊಂಡೆ. ಇನ್ನು ಮುಂದೆ ಹೀಗಾಗೋಲ್ಲ. ನಿನಗೊಂದು ಸರ್ಪ್ರೈಸ್. ಈ ಭಾನುವಾರವೇ ನಾವೆಲ್ಲ ಸೇರಿ ನೀನು ಬಹಳ ದಿನಗಳಿಂದ ಕೇಳುತ್ತಿದ್ದ ಮೈಸೂರಿಗೆ ಹೋಗುತ್ತಿದ್ದೇವೆ.
(ಶೀಲಾ ತನ್ನ ಕಿವಿಯನ್ನೇ ನಂಬದಾದಳು.)
(ಅಷ್ಟರಲ್ಲಿ ಮೂವರು ಗಿಫ್ಟ್ ಕೊಟ್ಟು ವಿಷ್ ಮಾಡುತ್ತಾರೆ)
ರಾಕೇಶ್ :  ಮಮ್ಮಿ ನನ್ನ ಪ್ಯಾಕಿಂಗ್ ನಾನೇ ಮಾಡಿಕೊಳ್ತೀನಿ. ನೀನೇನೋ ಬರೆಯುತ್ತಿದ್ದೆ ಎಂದಲ್ಲಅದನ್ನು ಮಾಡಿಕೊ. ಜೊತೆಗೆ ನೀನು ಸಂಜೆ ಮಹಿಳಾ ದಿನದ ಕಾರ್ಯಕ್ರಮಕ್ಕೆ ಹೋಗಬೇಕಲ್ಲ.
ಸುಧೀರ್ - ಶೀಲಾನಾನೇ ನಿನ್ನನ್ನು ಬಿಟ್ಟುಬರ್ತೀನಿ. ನಾನು ಆಫೀಸಿಗೆ ಹೋಗಿ ಬಂದುಬಿಡ್ತೀನಿ. ರೆಡಿಯಿರು. ವಾಪಸ್ಸು ನಾನೇ ಕರೆದುಕೊಂಡು ಬರ್ತೀನಿ.
ರಮ್ಯ : ಮಮ್ಮಿನಾನು ನನ್ನ ಸ್ನೇಹಿತರ ಜೊತೆ ಸಿನಿಮಾಗೆ ಹೋಗುವುದಿಲ್ಲ. ಯಾವಾಗ್ಲೂ ನಿನ್ನ ಜೊತೆ ಬಾ ಅಂತಾ ಇದ್ದೇಯಲ್ಲ,  ಇವತ್ತು ನಿನ್ನ ಜೊತೆ ನಾನು ಬರ್ತೀನಿಖುಷಿನಾ?
ಶೀಲಾ : (ಖುಷಿಯಿಂದ) ಥ್ಯಾಂಕ್ಸ್ಇಷ್ಟು ವರ್ಷಗಳಲ್ಲಿ ಮೊದಲ ಬಾರಿಗೆ ಮಹಿಳಾ ದಿನದಂದು ಬಹಳ ಖುಷಿಯಾಗಿದ್ದೇನೆ. ಈಗ ನಿಮ್ಮಬ್ಬರ ಬಗ್ಗೆ ನನಗೆ ಹೆಮ್ಮೆ ಎನಿಸುತ್ತಿದೆ. (ಕರೆಯುವಂತೆ ಕೈಚಾಚುವಳು)
ಅವರಿಬ್ಬರೂ ಶೀಲಾಳ ಹತ್ತಿರ ಬಂದು ಅವಳ ತೊಡೆಯ ಮೇಲೆ ತಲೆಯಿಡುವರು.
ಸುಧೀರ್ : ಮತ್ತೆ ನನ್ನ ಬಗ್ಗೆ?
(ಶೀಲಾ ಏನೂ ಮಾತನಾಡದೆ ಹೆಮ್ಮೆಖುಷಿಯ ನಗು ಬೀರುವಳು. ಸುಧೀರ್ ಸಹ ಮುಗುಳ್ನಗುತ್ತಾನೆ.)
      - ಸುಧಾ ಜಿ        

No comments:

Post a Comment