Tuesday 7 March 2017

ಕವನ - ಹೆಣ್ಣು


ಕಲ್ಲ ಹೆಣ್ಣ ಕಂಡರೆ ಪೂಜಿಪರು
ದಿಟವಾಗಿ  ಕಂಡರೆ ಕೊಲ್ಲೆಂಬರು
ಶಕ್ತಳಾಗಿ ಕಂಡರೆ ಗಂಡೆಂಬರು
ಸರಿ ಗಂಡೆಂದು ನಿಂತರೆ ಗಂಡುಬೀರಿ
ಎನ್ನುವರು
ಹೆಣ್ಣಾಗಿರುವೆನೆಂದರೆ ಅಬಲೆಯೆನ್ನುವರು
ಸರಿ ಅಬಲೆಯಾಗಿರುವೆನೆಂದರೆ
ಆಳಲು ಬರುವರು
ಹೆಣ್ಣಿಗೆ ಇದ್ದರೆ ಆಸ್ತಿ ಹಕ್ಕು
ಹೇಳಬೇಕಿಲ್ಲ ಇನ್ನು
ಗಂಡೆ ದಿಕ್ಕು

ಅವಳು ಅವನು ಇಬ್ಬರು ಸಮಾನರು
ಎಂದು ಹೇಳಿದ ಮೇಲೇನು ಅನುಮಾನ
ದೊರಕಲಿ ಅವಳಿಗು ಹಕ್ಕಿನ ಸ್ಥಾನ
ಬಾಳಲಿ ಅವಳು ಗಂಡಿಗೆ ಸಮಾನ

ಕೊಡಿರಿ  ಆಸ್ತಿಪಾಲು ಎಂದು
ಕೇಳಬೇಕಿಲ್ಲ ಇಂದು
ನಾವೆ ಪಡೆಯೋಣ
ನಮ್ಮ ಹಕ್ಕೆಂದು

ಕೇಳಿದರೆ ಆಸ್ತಿ
ಒಡೆದು ಹೋಗುವುದು
ಅಣ್ಣತಮ್ಮಂದಿರ ಪ್ರೀತಿ
ಬೇಡವೆಂದರೆ ತುಂಬಿ ಹರಿವುದೆ
ನಿಜವಾದ ಪ್ರೀತಿ
ಬೇಕಿಲ್ಲ ಕ್ಷಣಿಕ
ತೋರಿಕೆಯ ಪ್ರೀತಿ
ಕಾಣಲಿ ಅಕ್ಕತಂಗಿಯರ
ಸಮಾನ ರೀತಿ


- ಹೇಮಲತ. ಎಚ್.ಎಮ್   


No comments:

Post a Comment