Tuesday 12 September 2017

ಅನುವಾದಿತ ಕವಿತೆ - ಅಲ್ಪವಾದ ಬದುಕು


[Translation of Evangelin Dickenson’s  “LIFE DIMINISHED’]


ಮನೆಯಿಂದಾಚೆ ಕರೆದೊಯ್ದರೆನ್ನ
“ಆಚರಣೆಯೊಂದಿದೆ ” ಎಂದು
“ನೀನೀಗ ವಿಧವೆ”, ಹೆಣ್ಣಲ್ಲ
ಪಾಪಿಯೂ ಹೌದೆಂದರು.

ಕುಂಕುಮವಿಲ್ಲ, ಹಳದಿ ತಾಳಿಯಿಲ್ಲ
ಬಳೆ, ಗೆಜ್ಜೆ, ಉಂಗುರಗಳಿಲ್ಲ
ಅವೆಲ್ಲವೂ “ಜೀವಂತ” ಹೆಣ್ಣಿಗೆ
ವಿಧವೆ ನೀನು, ನಿನಗಲ್ಲ.

ಬಿಳಿಸೀರೆಯನ್ನುಟ್ಟು ನಡೆದೆ 
ಪ್ರೀತಿ-ವಾತ್ಸಲ್ಯರಹಿತ ಕೂಪಕೆ
ಉಳಿದಿಲ್ಲಿನ್ನು ಕಣ್ಣೀರು 
ಸಿಕ್ಕು ಬಿದ್ದೆ ಹಳೆ ಕಟ್ಟು ಪಾಡಿಗೆ.

ಹೆಣ್ಣಾಗಲಿಚ್ಛಿಸುವೆ ನಾ, ಶವವಲ್ಲ
ಶಾಪವಲ್ಲ, ಅಡ್ಡಿ-ಆತಂಕವಲ್ಲ
ಬದುಕಲಿಚ್ಛಿಸುವೆ ಇನ್ನೊಬ್ಬರ ನೆರಳಾಗಿಯಲ್ಲ
ವಿಶ್ವ ಬದಲಿಸಲು ಮಾಡಿರೆನಗೆ ಸಹಾಯವೆಲ್ಲ.

- ಸುಧಾ ಜಿ

No comments:

Post a Comment