Thursday 14 September 2017

ಸರಣಿ ಲೇಖನ - ಮಹಿಳೆ ಮತ್ತು ಮಕ್ಕಳು - 5

(ಹಿಂದಿನ ಸಂಚಿಕೆಯಿಂದ ಮುಂದುವರೆದಿದೆ)

 ಕುಟುಂಬ ಜೀವನ
ಈಗ ಬಹಳಷ್ಟು ಚರ್ಚಿತವಾದ, ‘ಕುಟುಂಬ ಜೀವನಮತ್ತುಕುಟುಂಬ ನಾಶವೆಂದೇ ಕರೆಯುವ ವಿಷಯಕ್ಕೆ ನಾನೀಗ ಬರಬೇಕಾಗಿದೆ; ವಿಷಯದ ಬಗ್ಗೆ ತುಂಬಾನೇ ಬರೆದು ಸಾಕಷ್ಟು ಕಾಗದ ಮತ್ತು ಇಂಕ್ ಖರ್ಚಾಗಿದೆ. ನಿಜವಾಗಿಯೂ ವಿಷಯದ ಬಗ್ಗೆ ಒಂದು ಭೇಟಿಯಿಂದ ಒಂದೆರೆಡು ವಿಷಯಗಳನ್ನು ಹೇಳಬಹುದಷ್ಟೇ! ಅದರ ಬಗ್ಗೆ ಪೂರ್ಣ ಪ್ರಮಾಣದಲ್ಲಿ ವಾದಿಸಬೇಕೆಂದರೆ ನಿಜವಾಗಿಯೂಕುಟುಂಬ ಅರ್ಥದ ಬಗ್ಗೆ ದೀರ್ಘ ಚರ್ಚೆಯು ಮತ್ತು ಕ್ರಾಂತಿಪೂರ್ವ ರಷ್ಯಾದಕುಟುಂಬ ಬಗ್ಗೆ ಪರಿಕಲ್ಪನೆಗಳೇನುಇದು ಖಂಡಿತವಾಗಿಯೂ ಬ್ರಿಟನ್ನಂತಿಲ್ಲಎನ್ನುವುದರ ಕುರಿತು ಸ್ವಲ್ಪಮಟ್ಟಿನ ತಿಳುವಳಿಕೆಯೂ ಬೇಕು. ಮೊದಲಿಗೆ, ಮೂರು ವಾಸ್ತವ ಸಂಗತಿಗಳನ್ನು ಹೇಳಬಹುದು: ಮೊದಲನೆಯದು, ನಮ್ಮ ದೇಶಕ್ಕಿಂತ ರಷ್ಯಾದಲ್ಲಿ ಜೀವನ ಸಂಗಾತಿಗಳನ್ನು ಬದಲಾಯಿಸುವುದು ಹೆಚ್ಚು ಮತ್ತು ಸುಲಭ; ಎರಡನೆಯದು, ಶಿಶುವಿಹಾರದಿಂದ ಕಾರ್ಖಾನೆಯ ಅಡುಗೆ ಮನೆಯವರೆಗೆ ಸರ್ಕಾರವು ನೀಡಿರುವ ಸೌಲಭ್ಯಗಳಿಂದಾಗಿ, ಅಡುಗೆ ಮಾಡುವ, ಮನೆ ಸ್ವಚ್ಛಗೊಳಿಸುವ ಮತ್ತು ಮಕ್ಕಳನ್ನು ನೋಡಿಕೊಳ್ಳುವ ಅರ್ಥದಲ್ಲಿಮನೆಗೆಲಸಗಳು ಇಂಗ್ಲಿಷ್ ಕುಟುಂಬಕ್ಕಿಂತ ರಷ್ಯನ್ ಕುಟುಂಬ ಜೀವನದಲ್ಲಿ ಅತ್ಯಂತ ಕಡಿಮೆ ಪಾತ್ರವಹಿಸುತ್ತವೆ; ಮೂರನೆಯದು, ಸಾಮಾನ್ಯವಾಗಿ ಕುಟುಂಬ ಜೀವನವನ್ನು ಮತ್ತು ವೈಯಕ್ತಿಕ ಸಂಬಂಧಗಳನ್ನು ಕಟ್ಟಕಡೆಯ ಮಾರ್ಗವಾಗಿ ದೇಶದ ಹಿತಾಸಕ್ತಿಗೆ ಸಮರ್ಪಿಸಬೇಕೆಂದು ಪರಿಗಣಿಸಲಾಗುತ್ತದೆ; ಮತ್ತೆ ರಷ್ಯಾದಂತೆ ಸಂಕಷ್ಟದಲ್ಲಿರುವ ದೇಶವು ವೈಯಕ್ತಿಕ ಹಾಗೂ ಕೌಟುಂಬಿಕ ಕರೆಗಳನ್ನು ಹಿಂದೆ ಸರಿಸಬಹುದು; ಹಾಗಿದ್ದರೂ ಸಹ, ನಾನು ಹಿಂದೆ ಹೇಳಿದಂತೆ, ಕೆಲವೊಂದು ಅತ್ಯಗತ್ಯವೆಂದು ಪರಿಗಣಿಸಿದ ವಿಷಯಗಳ1 ಹೊರತಾಗಿ ಸರ್ಕಾರವು ಎಲ್ಲದರಲ್ಲೂ ಅದೆಷ್ಟು ಉದಾತ್ತತೆ ತೋರಿಸುತ್ತದೆಯೆಂದರೆ ನೋಡಿದರೆ ಬಹಳ ಆಶ್ಚರ್ಯವಾಗುತ್ತದೆ.* (*ಇಲ್ಲಿ ಸೋವಿಯತ್ ಮದುವೆಯ ಕಾನೂನುಗಳ ಚಿತ್ರಣ ನೀಡಲು ಸ್ಥಳ ಸಾಲುವುದಿಲ್ಲ. ಇಲ್ಲಿ ಓದುಗರಿಗೆ ಚಿರಪರಿಚಿತ ಸಂಗತಿಗಳನ್ನು ನೆನಪು ಮಾಡಿಕೊಡಬಹುದು; ಅಲ್ಲಿ ಮದುವೆ ಮತ್ತು ವಿಚ್ಛೇದನಗಳೆರಡರಲ್ಲೂ ಪುರುಷರು ಹಾಗೂ ಮಹಿಳೆಯರಿಗೆ ಸಮಾನ ಸ್ಥಾನವಿದೆ; ಅಲ್ಲಿ ಅನೈತಿಕ ಸಂಬಂಧದ ಮಗು ಎನ್ನುವ ಪ್ರಶ್ನೆಯೇ ಇಲ್ಲ; ಮಗುವನ್ನು ಬೆಳೆಸಲು ಪುರುಷ ಮತ್ತು ಮಹಿಳೆ (ಆಕೆ ಸಂಪಾದಿಸುತ್ತಿದ್ದರೆ) ಇಬ್ಬರಿಗೂ ನಿರ್ದಿಷ್ಟ ಜವಾಬ್ದಾರಿಗಳಿರುತ್ತವೆ.)
ನಾನು ಭೇಟಿ ಮಾಡಿದ ರಷ್ಯನ್ನರು, ಯಾವುದೇ ನೈಜ ಅರ್ಥದಲ್ಲಿ ಕುಟುಂಬ ಜೀವನವು ನಾಶವಾಗಿಲ್ಲವೆಂದು ಬಹಳ ಗಟ್ಟಿಯಾಗೇ ಘೋಷಿಸಿದರು; ಹಾಗಿದ್ದರೂ ಕ್ರಾಂತಿಯಾದ ಮೇಲೆ ಇನ್ನಿತರ ಬೂಜ್ರ್ವಾ ನಿರುಪಯೋಗಿ ವಸ್ತುಗಳೊಡನೆ ಇದನ್ನೂ ಬಾಗಿಲಿಂದಾಚೆ ಎಸೆಯುವ ಪ್ರವೃತ್ತಿ ಇತ್ತೆಂದು ಒಪ್ಪಿಕೊಂಡರು. ಅವರು ಹೇಳುವಂತೆ ಸಂಪೂರ್ಣ ಮುಕ್ತ ಮದುವೆಗಳು ಇತರೆ ಮದುವೆಗಳಷ್ಟೇ ದೀರ್ಘಕಾಲ (ಅಥವಾ ಅಷ್ಟೇ ಕ್ಷಣಿಕಕಾಲ) ಇರುತ್ತವೆ; ಪಕ್ಷದ ಸದಸ್ಯಳಾಗಿರುವ ಮತ್ತು ನಿರ್ದಿಷ್ಟ ಉದ್ಯೋಗಕ್ಕೆಂದೇ ವಿಶೇಷ ತರಬೇತಿ ಹೊಂದಿರುವ ಹೆಂಡತಿಗೆ ಬೇರೆ ಕಡೆ ಕೆಲಸ ಮಾಡಬೇಕಾಗಿ ಬಂದಾಗ, ಜೊತೆಯಲ್ಲಿ ಹೋಗಲು ಗಂಡನು ಇಷ್ಟಪಡದಿದ್ದರೆ ಆಕೆ ಆತನಿಂದ ಬೇರೆಯಾಗಬಹುದು ಎಂಬುದು ತತ್ವದಲ್ಲಿದೆ; ಆದರೆ ವಾಸ್ತವದಲ್ಲಿ ಹೆಚ್ಚುಕಡಿಮೆ ಎಲ್ಲಾ ಸಮಯದಲ್ಲೂ ಹೊಂದಾಣಿಕೆಗಳಾಗುತ್ತವೆ. ಇದರಿಂದ ಸ್ವೇಚ್ಛಾಚಾರಕ್ಕೆ, ಸಂಗಾತಿಗಳನ್ನು ನಿರಂತರವಾಗಿ ಬದಲಾಯಿಸುವುದಕ್ಕೆ ಸಮ್ಮತಿಯಿಲ್ಲವೆಂಬುದು ಬಹಳ ಸ್ಪಷ್ಟವಾಗಿ ಕಾಣಿಸುತ್ತದೆ. ಕಮ್ಯುನಿಸ್ಟ್ ಪಕ್ಷದ ನೈತಿಕ ಮಟ್ಟವು ಇಂಗ್ಲಿಷ್ ಬೂರ್ಜ್ವಾ ಸಮಾಜದ ನೈತಿಕ ಮಟ್ಟಕ್ಕೆ ಸರಿಸಮನಾಗಿದೆಯೋ ಇಲ್ಲವೋ ಎಂಬುದು ಬೇರೆಆದರೆ ನೀತಿಯನ್ನು ಬೇರೆ ವಿಷಯಗಳಂತೆಯೇ ವಿಷಯದಲ್ಲೂ ನಿರ್ದಾಕ್ಷಿಣ್ಯವಾಗಿ ಎತ್ತಿಹಿಡಿಯಲಾಗುತ್ತದೆ.
ಅಡುಗೆ ಮಾಡುವುದು ಮತ್ತು ಸ್ವಚ್ಛಗೊಳಿಸುವುದು ಮತ್ತು ಕೊಳೆಯಾದ ನೆಲದ ಮೇಲೆ ಆಡುವ ಮಕ್ಕಳಿಗೆ ಸ್ನಾನ ಮಾಡಿಸುವುದು ಅಥವಾ ಆಲೂಗೆಡ್ಡೆ ಸಿಪ್ಪೆಯನ್ನು ಸುಲಿಯುವುದುಇದೆಲ್ಲಾ ಕುಟುಂಬ ಜೀವನದಲ್ಲಿ ಅದೆಷ್ಟರಮಟ್ಟಿಗೆ ಮೂಲಭೂತ ಅಂಶಗಳೆಂದು ವಿಮರ್ಶಕನು ಪರಿಗಣಿಸುತ್ತಾನೆ ಎನ್ನುವುದರ ಮೇಲೆಮನೆಗೆಲಸ ಪ್ರಶ್ನೆಗೆ ಕೊಡುವ ಉತ್ತರವು ಅವಲಂಬಿತವಾಗಿದೆ; ನಮ್ಮ ದೇಶದಲ್ಲಿ ಅಡುಗೆ ಮಾಡಲು ಮತ್ತು ಮನೆಯನ್ನು ಸ್ವಚ್ಛಮಾಡಲು ಕೂಲಿಯಾಳುಗಳನ್ನು ನೇಮಿಸಿಕೊಳ್ಳುವ ಮತ್ತು ತಮ್ಮ ಮಕ್ಕಳನ್ನು ಸಾಧ್ಯವಾದಷ್ಟು ಚಿಕ್ಕವಯಸ್ಸಿನಲ್ಲೇ ಶಾಲೆಗೆ ಕಳುಹಿಸಲು ಆತುರಪಡುವ ವರ್ಗದಿಂದ ಮನೆಗೆಲಸದ ಕೆಲಸಗಳನ್ನು ಸಾಮೂಹಿಕಗೊಳಿಸುವುದಕ್ಕೆ ಬಹಳ ಜೋರಾದ ಆಕ್ಷೇಪಣೆ ಬರುತ್ತಿರುವುದು ಗಮನಿಸಬೇಕಾದ ಆಸಕ್ತಿದಾಯಕವಾದ ವಿಷಯ. ನನ್ನ ಅನಿಸಿಕೆಯಲ್ಲಿ, ಸಾಮುದಾಯಿಕ ಸೇವೆಗಳಿಂದಾಗಿ ಮಾಸ್ಕೋದಲ್ಲಿ ಬಿಗಡಾಯಿಸಿದ್ದ ಮನೆ ಸಮಸ್ಯೆ ಕಡಿಮೆಯಾಗುತ್ತಿದೆ ಮತ್ತು ಅಲ್ಲಿ ವಾಸಿಸುತ್ತಿರುವವರ ಆರೋಗ್ಯ ಸುಧಾರಿಸುತ್ತಿದೆ. ಇಕ್ಕಟ್ಟಾದ ಮನೆಗಳಲ್ಲಿ ವಾಸಿಸುವವರು ವಿಶಾಲವಾದ ಮತ್ತು ಆರೋಗ್ಯಕರವಾದ ಸ್ಥಳಗಳಿಗೆ ಹೋಗದಿದ್ದರೆ, ಮನೆ ಕಸ ಹೊಡೆದು ಸಜ್ಜುಗೊಳಿಸುವಂತಹ ಕೆಲಸಗಳಲ್ಲಿ, ಅಡುಗೆ ಮಾಡುವ ಮತ್ತು ಬಟ್ಟೆಬರೆ ತೊಳೆಯುವ ಗೋಜಿನಲ್ಲಿ ಸಿಕ್ಕಿಕೊಂಡರೆ, ಆಗ ಅನಾರೋಗ್ಯಕರವಾದ ಮತ್ತು ಒತ್ತಡದ ವಾತಾವರಣದಲ್ಲಿ ಜೀವಿಸಬೇಕಾಗುತ್ತದೆ. ದಪ್ಪಗಿರುವ ಕಾರ್ಪೆಟ್, ಪರದೆಗಳು , ಮೆತ್ತನೆಗಳ ಕೊರತೆಯ ಜೊತೆಗೆ ಅಗ್ಗಿಷ್ಟಿಕೆಗಳ ಕೊರತೆಯೂ ಸೇರಿಕೊಂಡರೂ ರಷ್ಯಾದಲ್ಲಿ ಒಂದು ರೂಮಿನಲ್ಲಿ ವಾಸಿಸುವುದು (ಲಂಡನ್ನಲ್ಲಿರುವ) ಶೆಫೀಲ್ಡ್ ಅಥವಾ ಲಿವರ್ಪೂಲ್ನಲ್ಲಿ ವಾಸಿಸುವುದಕ್ಕಿಂತ ಹೆಚ್ಚು ಸಹನೀಯ; ಏಕೆಂದರೆ ರಷ್ಯಾದ ರೂಮಿನಲ್ಲಿ ಮುಗ್ಗಲಿನ ವಾಸನೆಯಿರುತ್ತದೆ. ಆದರೆ ಇದರಿಂದ ರಷ್ಯಾದಲ್ಲಿ ಮನೆಯಲ್ಲಿ ಯಾರೂ ಅಡುಗೆಯನ್ನೇ ಮಾಡುವುದಿಲ್ಲವೆಂಬ ತೀರ್ಮಾನಕ್ಕೆ ಬರಬಾರದು. ಕೆಲವರು ಸಂಪೂರ್ಣವಾಗಿ ಸಾಮೂಹಿಕ ಬೋಜನ ಮಾಡುತ್ತಾರೆ; ಕೆಲವರು ಸಾಮೂಹಿಕ ಅಡುಗೆಮನೆಯಲ್ಲಿ ತಮ್ಮ ಊಟವನ್ನು ತೆಗೆದುಕೊಂಡು ಮನೆಯಲ್ಲಿ ತಿನ್ನುತ್ತಾರೆ; ಕೆಲವರು ಒಂದು ಹೊತ್ತು ಮಾತ್ರ ಮನೆಯಲ್ಲಿ ತೆಗೆದುಕೊಳ್ಳುತ್ತಾರೆ; ಮತ್ತೆ ಕೆಲವರಿಗೆ ಮನೆಯಲ್ಲೇ ಅಡುಗೆಮನೆಯಿರುತ್ತದೆ; ಮತ್ತೆ ಕೆಲವರು ಬೇರೆ ಕುಟುಂಬದೊಂದಿಗೆ ಅಥವಾ ಕುಟುಂಬಗಳೊಂದಿಗೆ ಸೇರಿ ಹಂಚಿಕೊಳ್ಳುತ್ತಾರೆ. ಇದರಲ್ಲಿ ಹೆಚ್ಚುಕಡಿಮೆ ಅನಂತ ರೀತಿಯ ವೈವಿಧ್ಯತೆಯಿದೆ ಮತ್ತು ರಷ್ಯನ್ ವಿಶಿಷ್ಟ ಶೈಲಿಯು ಒಂದು ರೀತಿಯಿಂದ ಇನ್ನೊಂದು ರೀತಿಗೆ ಸುಲಭವಾಗಿ ಬದಲಾಗಲು ಅವಕಾಶ ನೀಡುತ್ತದೆ. ‘ಬೊಲ್ಷೆವೊ ನಿರ್ದೇಶಕರು ತಮ್ಮ ವಿವಾಹಿತ ನೌಕರವರ್ಗದವರ ಬಗ್ಗೆ ಹೀಗೆ ಹೇಳಿದರು: “ಅವರು ಮದುವೆಯಾದ ಮೊದಲಿಗೆ ಸಂಪೂರ್ಣವಾಗಿ ತಾವೇ ಇರುವ ಜಾಗ ಮತ್ತು ತಮ್ಮದೇ ಆದ ಅಡುಗೆ ಮನೆಯಿರಲು ಬಯಸುತ್ತಾರೆಆದರೆ ಆರೇ ತಿಂಗಳಲ್ಲಿ ಅವರಿಗೆ ಬೇಸರವಾಗಿ ಸಾಮೂಹಿಕ ಸೇವೆಗಳಿಗೆ ಬರುತ್ತಾರೆ.” ಇದು ಬಹಳ ವಿಶಿಷ್ಟವಾದದ್ದು! ಪ್ರಪಂಚದ ಬೇರೆ ಭಾಗಗಳಿಗಿಂತ ರಷ್ಯಾದಲ್ಲಿ ಸಂಬಂಧಗಳು ಖಂಡಿತವಾಗಿಯೂ ಸಡಿಲವಾಗಿವೆ; ಆದರೆ ನಾನು ಕಂಡಂತೆ ಅಲ್ಲಿ ಕುಟುಂಬದ ಪ್ರೀತಿ-ವಿಶ್ವಾಸಗಳು ಅಳಿಸಿಹೋಗಿವೆ ಅಥವಾ ತಮ್ಮ ಬದ್ಧತೆಗಳನ್ನು ಪೂರೈಸುತ್ತಿಲ್ಲ ಎನ್ನುವುದು ಇದರರ್ಥವಲ್ಲ. ಮಾಸ್ಕೊದಲ್ಲಿ ನಮ್ಮ ಜೊತೆಯಿದ್ದ ಮಾರ್ಗದರ್ಶಿಯೊಬ್ಬ ಯಾವುದೇ ಸಮಾರಂಭವಿಲ್ಲದೆ ಮದುವೆಯಾಗಿದ್ದ ಮತ್ತು ಅವನೇ ಹೆಮ್ಮೆಯಿಂದ ಹೇಳುವಂತೆಯಾವುದೇ ಜಗಳವಿಲ್ಲದೆ ಏಳು ವರ್ಷಗಳುಕಳೆದಿವೆ; ಅವನು ರೈತನ ವಿಧವೆಯಾದ ತನ್ನ ತಾಯಿಯನ್ನು ತನ್ನ ಸಂಬಳದಿಂದಲೇ ಸಲಹುತ್ತಾನೆ; ನನ್ನ ಜೊತೆಯಲ್ಲಿ ಟೀ ಕುಡಿಯುತ್ತಿದ್ದ ಕೆಂಪು ಸೈನ್ಯದ ಮಾಜಿ ಸೈನಿಕನು ಜಾರ್ಜಿಯಾದ ಹಳ್ಳಿಯಲ್ಲಿರುವ ತನ್ನ ಸೋದರರ ಇಬ್ಬರು ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುತ್ತಾನೆ ಮತ್ತುಕೊಲ್ಕೊಜ್ನಲ್ಲಿ ಒಳ್ಳೆಯ ಸ್ಥಾನದಲ್ಲಿರುವ ತನ್ನ ಸೋದರನಿಂದ ಸಹಾಯವನ್ನೂ ಪಡೆಯುತ್ತಾನೆ; ಹೀಗೆ ಹಲವು ಉದಾಹರಣೆಗಳಿವೆ. ಒಂದು ಸಲ ಕಣ್ಣು ಹಾಯಿಸಿ ನೋಡಿದರೆ, ಸಹಜವಾದ ಪ್ರೀತಿ-ವಿಶ್ವಾಸಗಳು ಮಹಿಳೆಯರ ಸ್ಥಾನಮಾನದಲ್ಲಾದ ಬದಲಾವಣೆಯಿಂದಾಗಿ ಅಥವಾ ಸಾಮೂಹಿಕ ಸೇವೆಗಳ ಹೆಚ್ಚಳದಿಂದಾಗಿ ಒಂದಲ್ಲ ಒಂದು ದಿಕ್ಕಿನೆಡೆಗೆ ಮಾರ್ಪಾಡಾಗಿರುವ ಸಾಧ್ಯತೆಯಿದೆಯೇ ಹೊರತು ವಿನಾಶವಾದಂತೆ ಕಾಣುವುದಿಲ್ಲ.

ಉಪಸಂಹಾರ/ತೀರ್ಮಾನಗಳು
ಹಾಗಾದರೆ, ರಷ್ಯನ್ ಜೀವನದ ಮುಖದ ಬಗ್ಗೆ ವೀಕ್ಷಕನ ಸಾಮಾನ್ಯ ಅಭಿಪ್ರಾಯಗಳೇನು ಮತ್ತು ಹೆಚ್ಚು ಅಭಿವೃದ್ಧಿ ಹೊಂದಿದ ರಾಷ್ಟ್ರದಲ್ಲಿ ಸಮಾಜವಾದ ಬಂದರೆ, ಅದಕ್ಕೇನಾದರು ಕಲಿಯಲು ಪಾಠಗಳಿವೆಯೇ?
ನನ್ನ ಸ್ವಂತ ದೃಷ್ಟಿಯಲ್ಲಿಅದನ್ನು ಎಲ್ಲಾ ಬಗೆಯ ಅಭಿಪ್ರಾಯಗಳಿರುವ ಹಲವಾರು ವೀಕ್ಷಕರು ಹಂಚಿಕೊಂಡಿದ್ದಾರೆಅದರ ರೂಪುರೇಷೆ ಉದ್ದೇಶಗಳು ಸಂಪೂರ್ಣವಾಗಿ ಪ್ರಶಂಸನೀಯ ಮತ್ತು ಅದರ ಪರಿಣಾಮಗಳು ಈಗಾಗಲೇ ಅಪೂರ್ವವಾದ್ದಾಗಿದೆ. ಆದರೆ ಅದು ಈಗಾಗಲೇ ಸಂಪೂರ್ಣ ಎನ್ನುವಂತದ್ದಲ್ಲ; ಅದರಲ್ಲಿ ಹಲವುತಾತ್ಕಾಲಿಕವಾಗಿವೆ; ಸೊವಿಯತ್ ಯೂನಿಯನ್ ತನ್ನೆಲ್ಲಾ ಕ್ರೆಷೆ, ಶಿಶುವಿಹಾರ, ಶಾಲೆ, ಶಿಬಿರ, ಆಸ್ಪತ್ರೆ, ಮುಂತಾದವುಗಳಿಗೆ ಸಿಬ್ಬಂದಿ ವರ್ಗವನ್ನು ಒದಗಿಸಲು ಮತ್ತು ಅವುಗಳನ್ನು ನಡೆಸಲು ಎರಡನೇ ಮತ್ತು ಮೂರನೇ ಶ್ರೇಣಿಯ ಸಾಮಥ್ರ್ಯವುಳ್ಳ ಅಸಂಖ್ಯಾತ ಪುರುಷರನ್ನು ಮಹಿಳೆಯರನ್ನು ತನ್ನತ್ತ ಸೆಳೆದುಕೊಳ್ಳಬೇಕು; ಮತ್ತೆ ಮನಸ್ಸಿಗೆ ಸಂಸ್ಥೆಯನ್ನು ಕಾರಾಗೃಹವನ್ನಾಗಿ ಮಾಡುವಂತಹ ನಿತ್ಯಕ್ರಮ (ROUTINE)ಗಳಿಗೆ ಕಟಿಬದ್ಧವಾಗದಂತೆ ನೋಡಿಕೊಳ್ಳುವುದು; ಇದೆಲ್ಲದರ ಮೇಲೆ ಅದು ತನ್ನದೇ ಆದ ನಿಜವಾದ ಮಾದರಿ ವ್ಯವಸ್ಥೆಯಾಗಬಲ್ಲದು. ಇಲ್ಲಿಯವರೆಗೂ ಸೋವಿಯತ್ ಸಂಸ್ಥೆಗಳ ತಾಜಾತನ ಮತ್ತು ಹೊಂದಿಕೊಳ್ಳುವ ಗುಣ, ಉತ್ಸಾಹವೂ ಕೂಡ ಅದರ ಬಲವಾದ ಅಂಶ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಆದರೆ ಬಹಳ ಉತ್ಸಾಹದಿಂದ ಆರಂಭವಾದ ಸಂಸ್ಥೆ ನಂತರದ ದಿನಗಳಲ್ಲಿ ಸ್ವಲ್ಪ ಸೋತುಹೋದಂತೆ, ಚರ್ವಿತಚರ್ವಣವಾದಂತೆ ಕಂಡುಬಂದ ಉದಾಹರಣೆಗಳೂ ಇವೆ; ಬಹುಶಃ ಅವುಗಳ ಸಂಖ್ಯೆ ಹೆಚ್ಚಲೂಬಹುದು. ಇಂತಹ ಸಂಸ್ಥೆಗಳ ಭವಿಷ್ಯವು ರಷ್ಯನ್ ಯೋಜನೆಯ ಒಟ್ಟಾರೆ ರಷ್ಯನ್ ಯೋಜನೆಯ ಯಶಸ್ಸಿನ ಅವಲಂಬಿತವಾಗಿರುವುದಂತೂ ಸ್ಪತ್ಯ; ಕಡೆಯಲ್ಲಿ, ವಯಸ್ಕರ ಗುಣಮಟ್ಟವೂ ಉನ್ನತಿ ಹೊಂದದೆ ಮಕ್ಕಳ ಗುಣಮಟ್ಟಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಅದೇನೇ ಇರಲಿ, ಅವರು ಗಳಿಸಿರುವ ಯಶಸ್ಸಿನ ಪ್ರಮಾಣವಂತೂ ಅಗಾಧವಾದದ್ದು. ಅದನ್ನು ಶಿಶುಮರಣದ ಪ್ರಮಾಣವು ಇಳಿಮುಖವಾಗುತ್ತಿರುವುದರಿಂದಲೇ ಅಳೆಯಬಹುದು; ನಿಜ ಅದು ಜನಸಂಖ್ಯೆಯ ಶೀಘ್ರ ಏರಿಕೆಗೆ ಕಾರರಣ ಮತ್ತು ಅಲ್ಲಿನ ಕ್ರೆಷೆಗಳ ಮಕ್ಲಕಳು ಸಂತಸ ತುಂಬಿದ ಹಗೂ ಆರೋಗ್ಯಕರವಾದ ಕಂಗೊಳಿಸುತ್ತಿದ್ದಾರೆ; ಕಡೆಯದಾದರೂ ಕಡೆಗಣಿಸಲಾಗದು, ವ್ಯವಸ್ಥೆಯು ತನ್ನ ಮಹಿಳೆಯರ ಶಕ್ತಿ ಮತ್ತು ಸಾಮರ್ಥ್ಯಗಳನ್ನು ಸಾಮಾಜಿಕ ಉದ್ದೇಶಗಳಿಗಾಗಿ ಪುರುಷರಿಗೆ ಸರಿಸಮನಾಗಿ ಬಳಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದೆ.
ಕಡೆಯ ಅಂಶದಲ್ಲಿ ರಷ್ಯನ್ನರಿಂದ ಇಂಗ್ಲಿಷ್ ಸಮಾಜವಾದಿ ರಾಷ್ಟ್ರವು ಕಲಿಯಲು ಸಾಕಷ್ಟಿದೆ. ಇಲ್ಲಿ (ಇಂಗ್ಲೆಂಡ್ನಲ್ಲಿ) ಸಾಮುದಾಯಿಕ ಸಂಸ್ಥೆಗಳು ಗೊತ್ತಿಲ್ಲವೆಂದಲ್ಲ; ನಾನು ರಷ್ಯಾದಲ್ಲಿ ನೋಡಿದ್ದಕ್ಕಿಂತ ಉತ್ತಮವಾದ ಕ್ರೆಷೆ ಮತ್ತು ಶಾಲೆಗಳು ನಮ್ಮಲ್ಲಿವೆ ಮತ್ತು ನಾವು ಇಚ್ಛಿಸಿದಲ್ಲಿ ಇನ್ನೂ ಹೆಚ್ಚು ತೆರೆಯಬಹುದು. ಅತ್ಯಂತ ಪರಿಣಿತ ಹೊಂದಿದ ಸೇವಾ ಸೌಲಭ್ಯಗಳು ನಮ್ಮಲ್ಲಿವೆ ಮತ್ತು ಅವುಗಳನ್ನು ಕಡಿಮೆ ಮಾಡುವ ಬದಲು ವಿಸ್ತರಿಸಲು ನಿರ್ಧರಿಸಿದರೆ ಪ್ರಪಂಚದಲ್ಲೇ ಅತ್ಯುತ್ತಮವಾಗುತ್ತವೆ. ನಾವು ಕಡಿಮೆ ಆದಾಯವಿರುವ ಜನರೆಇಗೆ ಸ್ವಲ್ಪಮಟ್ಟಿಗಾದರೂ ವಾಸಸ್ಥಳಗಳನ್ನು ಕಟ್ಟಬಹುದು. ಆದರೆ ನಾವು ನಮ್ಮ ಮಹಿಳೆಯರ ಸಾಮಾಜಿಕ ಸಾಮಥ್ರ್ಯಗಳನ್ನು ಅನಾಹುತವಾಗುವ ಮಟ್ಟಕ್ಕೆ ಉಪಯೊಗಿಸಿಕೊಳ್ಳದೆ ಬಿಟ್ಟಿದ್ದೇವೆ; ನಾವು ಎಲ್ಲರ ಜೀವನಮಟ್ಟವನ್ನು ಉತ್ತಮಪಡಿಸಲು ನಿಜವಾಗಿಯೂ ಸಾಮಾಜಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳುವಂತಹ ಒಂದು ಸಮಾಜವಾದಿ ಸಮಾಜವನ್ನು ಕಟ್ಟಬೇಕೆಂದರೆ, ನಮಗೆ ಮಹಿಳೆಯರ ಸಹಕಾರ ಬೇಕೇ ಬೇಕು. ನಾವು ವಾಸ್ತವವಾಗಿ ವಿವೇಚನೆಯಿಲ್ಲದೆ ನಡೆಯುವ ಗೃಹಕೃತ್ಯ ಕೈಗಾರಿಕೆಯನ್ನು, ಮಾನವನ ಸಮಯ ಮತ್ತು ಸಾಮಗ್ರಿಗಳ ದುರ್ಬಳಕೆಯನ್ನು ಕಡಿಮೆ ಮಾಡುವ ಸಲುವಾಗಿ ವಿವೇಚನೆಯಿಂದ ನೋಡುವ ಅಗತ್ಯವಿದೆ; ಮಕ್ಕಳಿಗೆ ಜನ್ಮ ನೀಡುತ್ತಾರೆಂಬ ಕಾರಣಕ್ಕೆ ಆರ್ಥಿಕತೆಯ ಕ್ಷೇತ್ರಗಳಲ್ಲಿ ಉದ್ಯೋಗ ಕೊಡದೆ ಅಲ್ಲಿ ಉಪಯೋಗವಿಲ್ಲದ ಮತ್ತು ಅದಕ್ಕೆ ತದ್ವಿರುದ್ಧವಾಗಿ ಅದರ ಒಂದಲ್ಲ ಒಂದು ವಿಭಾಗದಲ್ಲಿ ಪ್ರತಿಭೆಯುಳ್ಳ ಮಹಿಳೆಯರನ್ನು ವಿಶಾಲವಾದ ಮತ್ತು ಹೆಚ್ಚು ಆರ್ಥಿಕತೆಯ ಕ್ಷೇತ್ರದಲ್ಲಿ ಉದ್ಯೋಗ ನೀಡಬೇಕು; ಯಾವ ಮಹಿಳೆಯರು ತಮ್ಮ ಮಕ್ಕಳಿಗೆ ಜನ್ಮ ನೀಡಲು ಮತ್ತು ಅವರನ್ನು ಬೆಳೆಸಲು ಸಾಕಷ್ಟು ವರ್ಷಗಳನ್ನು ವ್ಯಯಿಸಿದಾರೋ ಅವರು ಉಪಯುಕ್ತ ವೃತ್ತಿಯಲ್ಲಿ ತೊಡಗುವುದರಿಂದ ಹೊರಹಾಕದಂತೆ ಅಥವಾ ಪರಿಣಿತ ಬೇಡದ ಮತ್ತು ಬೇರೆ ಯಾರೂ ಮಾಡಲು ಇಷ್ಟ ಪಡದ ಕೆಲಸಗಳಿಗೆ ತಳ್ಳದಂತೆ ನೋಡಿಕೊಳ್ಳಲು ಅವರಿಗೆಮುಂದುವರಿಕೆ ಶಿಕ್ಷಣಅಥವಾಮರುಶಿಕ್ಷಣನೀಡಲು ವಿಧಾನಕ್ರಮಗಳ ಬಗ್ಗೆ ಚಿಂತಿಸುವ ಅಗತ್ಯವಿದೆ. ನಮ್ಮ ಮಹಿಳೆಯರ ಸಹಕಾರವನ್ನು ಸಂಪೂರ್ಣವಾಗಿ  ಪಡೆಯಬೇಕೆಂದರೆ, ಮಹಿಳೆಯರ ಸ್ಥಾನಮಾನದ ಬಗ್ಗೆ ಮತ್ತು ಮಹಿಳಾ ಕಾರ್ಮಿಕರ ಬಗ್ಗೆ ಸಾಮಾನ್ಯ ದೃಷ್ಟಿಕೋನದಲ್ಲಿ ಕೆಲವು ಬದಲಾವಣೆಗಳ ಅಗತ್ಯವಿದೆ. ಬಂಡವಾಳಶಾಹಿ ಉದ್ದೇಶಗಳ ಮೇಲೆ ನಿಂತಿರುವ ಸಮಾಜವು ಕಣ್ಮರೆಯಾಗುವುದರೊಂದಿಗೆ ಕೆಲವು ಬದಲಾವಣೆಗಳು ತಾನೇತಾನಾಗಿ ನಡೆಯುತ್ತವೆ; ಆದರೆ ಮೇಲೆ ತಿಳಿಸಿದ ಪ್ರಾಯೋಗಿಕ ವ್ಯವಸ್ಥೆಗಳಿಗೆ ತುಂಬಾ ಜಾಗರೂಕತೆಯಿಂದ ಯೋಜನೆ ರೂಪಿಸುವ ಅಗತ್ಯವಿದೆ. ಜೊತೆಗೆ, ವಿಷಯದಲ್ಲಿ ನಾವು ರಷ್ಯನ್ನರ ಅನುಭವದಿಂದ ಸ್ವಲ್ಪ ಸಹಾಯ ಪಡೆದುಕೊಂಡರೆ ಮತ್ತು ವ್ಯಕ್ತಿಗತ ವ್ಯತ್ಯಾಸಗಳಲ್ಲಿ ಅವರ ಉದಾರತೆ ಮತ್ತು ಅವಕಾಶ ನೀಡುವಿಕೆಯನ್ನು ಕಲಿತುಕೊಳ್ಳಬೇಕು; ಹಾಗಾದಾಗ, ಸೋವಿಯತ್ ರಷ್ಯಾದಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ನೋಡುವ ಬಗೆ ಇಂಗ್ಲಿಷ್ ಸಮಾಜವಾದಿಗಳಿಗೆ ಸ್ಫೂರ್ತಿ ಮಾತ್ರ ಆಗದೆ ನಿಜವಾಗಿಯೂ ಪ್ರಾಯೋಗಿಕವಾಗಿ ಉಪಯೋಗವಾಗುತ್ತದೆ.
******

ಅನುಬಂಧ – 1: ಅಸಮರ್ಥ ಮತ್ತು ಅನಾಥ ಮಕ್ಕಳು
ಸೋವಿಯತ್ ವ್ಯವಸ್ಥೆಯ ಬಗ್ಗೆ ಬರೆದ ಲೇಖಕರಲ್ಲಿ ಹೆಚ್ಚಿನವರು ತೋರಿಸುವ ವಿಷಯವೇನೆಂದರೆ, ಈಗ ರಷ್ಯಾದಲ್ಲಿ ವಾಸಿಸುತ್ತಿರುವ ಜನಸಂಖ್ಯೆಯಲ್ಲಿ ಒಂದು ಭಾಗ (ಅದರ ಅಂದಾಜು ಸಂಖ್ಯೆಯಲ್ಲಿ ಸಾಕಷ್ಟು ವ್ಯತ್ಯಾಸವಿದೆ) ವ್ಯವಸ್ಥೆಯ ಉದ್ದೇಶ ಮತ್ತು ಗುರಿಗಳಿಂದ ಹೊರಗುಳಿದಿದೆ; ಆದ್ದರಿಂದ ಅಧ್ಯಾಯದಲ್ಲಿ ಚರ್ಚೆ ಮಾಡುವ ಸಾಮಾಜಿಕ ಸೇವೆಗಳು ಅವರಿಗೆ ಅನ್ವಯವಾಗುವುದಿಲ್ಲ. ವರ್ಗದಲ್ಲಿ, ಹೊಸ ವ್ಯವಸ್ಥೆಯ ಒಳಗಡೆ ಬಾರದ ಅಳಿದುಳಿದ ಮಾಜಿ-ಬೂರ್ಜ್ವಾಗಳಿದ್ದಾರೆ; ಸರ್ಕಾರದೊಂದಿಗೆ ಸಂಪರ್ಕದಲ್ಲಿರದ ಕುಲಕರಿದ್ದಾರೆ(ಜಮೀನುದಾರರು); ವಿವಿಧ ರೀತಿಯ ಭಿಕ್ಷುಕರಿದ್ದಾರೆ ಮತ್ತು ಅಸಮರ್ಥರೂ ಇದ್ದಾರೆ; ಇವರೆಲ್ಲರೂ ವ್ಯವಸ್ಥೆಯ ಹೊರಗಿರುವುದು ಅದರಲ್ಲೂ ಮಕ್ಕಳ ವಿಷಯದಲ್ಲಿ ಪಾಶ್ಚಿಮಾತ್ಯ ಕಣ್ಣುಗಳಿಗೆ ನೋವಿನ ಸಂಗತಿ. ಉದಾಹರಣೆಗೆ ಪೂರ್ವ ಅಥವಾ ದಕ್ಷಿಣ ಭಾಗದ ಯುರೋಪಿನ ಯಾವುದೇ ಚರ್ಚಿನ ಮುಂದೆ ತಮ್ಮ ದಾರಿದ್ರ್ಯದ ಭಾಗವಾಗಿ ವಿವಿಧ ಹಂತಗಳಲ್ಲಿ ಸೊರಗಿರುವ, ರೋಗಗ್ರಸ್ತವಾಗಿರುವ, ಅಂಧರಾಗಿರುವ ಮಕ್ಕಳನ್ನು ತೋರಿಸುತ್ತಾ ಭಿಕ್ಷೆ ಬೇಡುವ ಮಹಿಳೆಯರಂತೆ, ಈಗಲೂ ಮಾಸ್ಕೊದ ಗ್ರೀಕ್ ಚರ್ಚಿನ ಮುಂದೆಯೂ ಭಿಕ್ಷುಕರು ಕುಳಿತಿರುತ್ತಾರೆ. ಅಂತಹ ನೋಟವು ಸಾಮಾನ್ಯವಾಗಿ ರಷ್ಯಾದಲ್ಲಿ ಮಕ್ಕಳ ಜೀವನ ಮತ್ತು ಆರೋಗ್ಯಕ್ಕೆ ಮಾಡಿರುವ ವ್ಯವಸ್ಥೆಗೆ ಭಿನ್ನದೃಶ್ಯವಾಗಿ ಕಂಡು ನೋವುಂಟು ಮಾಡುತ್ತದೆ; ಇಂತಹ ದೃಶ್ಯ ಲಂಡನ್ನಲ್ಲಿ ಕಾಣಿಸುವುದಿಲ್ಲ ಮತ್ತು ಎನ್.ಎಸ್.ಪಿ.ಸಿ.ಸಿ.ಯಿಂದ ಪರಿಶೀಲಕರು ಬಂದು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತಹ ಸ್ಥಳಕ್ಕೆ ಕರೆದೊಯ್ಯಲು ಒತ್ತಾಯಮಾಡಬೇಕೆಂದು ಇಂಗ್ಲಿಷ್ ವೀಕ್ಷಕರು ಅಭಿಪ್ರಾಯಪಡುತ್ತಾರೆ. ರೀತಿ ನಗರಗಳಲ್ಲಿ ಮಕ್ಕಳನ್ನು ಬೀದಿಯಲ್ಲಿ ಬಿಟ್ಟರೆ, ಅವರ ಯೋಗಕ್ಷೇಮ ನೋಡಿಕೊಳ್ಳದಿದ್ದರೆ ವಾಸ್ತವದಲ್ಲಿ ಅಷ್ಟು ದೊಡ್ಡ ವ್ಯವಸ್ಥೆಯ ಉಪಯೋಗವಾದರೂ ಏನೂ; ಇದು ಇಂಗ್ಲಿಷ್ ವೀಕ್ಷಕನ ಪ್ರಶ್ನೆ. ಅದಕ್ಕೆ ಉತ್ತರವೆಂದರೆ, ಮಾಸ್ಕೊ ಮತ್ತು ಲೆನಿನ್ಗ್ರಾದ್ ನಗರಗಳ ಕೆಲವು ಬೀದಿಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಮಕ್ಕಳು ಬೀದಿಯಲ್ಲಿರಬಹುದು; ಏಕೆಂದರೆ ಸೋವಿಯತ್ ಆರೋಗ್ಯ ಮತ್ತು ಕಲ್ಯಾಣ ಸೇವೆಗಳು ಇಂಗ್ಲಿಷ್ ಸಾರ್ವಜನಿಕ ಆರೋಗ್ಯ ಸೇವೆಗಳಿಗಿಂತ ಭಿನ್ನವಾಗಿವೆ; ಅವುಗಳ ಉದ್ದೇಶವು ಸಾರ್ವಜನಿಕರ ಕಣ್ಣಿಗೆ ಕೆಟ್ಟದಾಗಿ ಕಾಣದಂತೆ ಮರೆಮಾಚುವುದಲ್ಲ; ಅದನ್ನು ಸಮಾಜದ ಸಮಗ್ರ ಯೋಜನೆಯನ್ನು ಜಾರಿಗೊಳಿಸುವಂತೆ ರೂಪಿಸಲಾಗಿದೆ. ಇದು ಇಂಗ್ಲೆಂಡ್ನಲ್ಲಿ, ನಮ್ಮ ಸಾಮಾಜಿಕ ವ್ಯವಸ್ಥೆಯ ಹುಚ್ಚುತನದಿಂದಾಗಿ ಎರಡು ಮಿಲಿಯನ್ ಜನರು ಕ್ರಮೇಣವಾಗಿ ನಶಿಸಿಹೋಗುತ್ತಿದ್ದರೂ ಒಬ್ಬ ಹಸಿವಿನಿಂದ ಬಳಲುತ್ತಿರುವವನ ಬಗ್ಗೆ ಸಾರ್ವಜನಿಕ ಅಭಿಪ್ರಾಯವನ್ನು ಬಡಿದೆಬ್ಬಿಸುವುದು ಬಹಳ; ಆದರೆ ಅದು ರಷ್ಯಾದಲ್ಲಿ ತದ್ವಿರುದ್ಧ. ಸಾಮಾನ್ಯವಾದ ವ್ಯವಸ್ಥೆಯು ಸೂಕ್ತವಾಗಿದೆಯೆಂಬ ನಂಬಿಕೆ ಬಂದರೆ, ಆಗ ಅದರಲ್ಲಿ ಸೇರದ, ಹಸಿವಿನಿಂದ ಬಳಲುವ ಕೆಲವು ಜನರಿದ್ದಾರೆ ಎಂಬ ಸಂಗತಿಯು ಕಿರಿಕಿರಿಯುಂಟು ಮಾಡಬಹುದೋ ಹೊರತು ಎಲ್ಲರಿಗೂ ತಿರಸ್ಕಾರ ಬರುವುದಿಲ್ಲ. ಸರ್ಕಾರದ ದೋರಣೆಯೆಂದರೆ, “ಅವರು ಇಷ್ಟಪಟ್ಟರೆ ಬರಬಹುದು. ಅವರು ಬರದಿದ್ದರೆ ಒತ್ತಾಯದಿಂದ ಕರೆತರಲು ನಮಗೆ ಸಮಯವೂ ಇಲ್ಲ, ಸಂಪನ್ಮೂಲವೂ ಇಲ್ಲ.” ಆದರೆ ಹಾಗೆ ಬರದೇ ಹೋದವರ ಸಮಸ್ಯೆಯಾಗಿ ನಿಜವಾಗಿಯೂ ಸಾಮಾಜಿಕ ಸಮಸ್ಯೆಯ ರೂಪಪಡೆದುಕೊಂಡಾಗ ಕ್ರಮಗಳನ್ನು ತೆಗೆದುಕೊಳ್ಳಲು ಸೋವಿಯತ್ ಯೂನಿಯನ್ ಸಜ್ಜಾಗಿದೆ. ಇದುಅನಾಥ ಮಕ್ಕಳ’ (ಅಂತರ್ಯುದ್ಧದಲ್ಲಿ ಬೀದಿಗೆ ಬಿದ್ದ ಮಕ್ಕಳು) ಸಿನಿಮಾದಲ್ಲಿ ತುಂಬಾ ಚೆನ್ನಾಗಿ ಚಿತ್ರಿಸಿರುವ ವಿಧಾನಗಳಿಂದ ಮಕರೆಂಕೊರಂತಹ ಮೇಧಾವಿ ಮತ್ತು ಅವರ ಜಿ.ಪಿ.ಯು ಸಹೋದ್ಯೋಗಿಗಳ ಮೂಲಕ ರಕ್ಷಿಸಿದರು. ಸಮಸ್ಯೆಯನ್ನು ದೊಡ್ಡ ಪ್ರಮಾಣದಲ್ಲಿ ಬಗೆಹರಿಸಲಾಗಿದೆ; ಆದರೆ ಈಗಲೂ ವಿವಿಧ ನಗರಗಳಲ್ಲಿ ಅನಾಥ ಮಕ್ಕಳ ಪುನರ್ವಸತಿ ಕೇಂದ್ರಗಳು ನಡೆಯುತ್ತಿವೆ; ನನಗೆ ತಿಳಿದಮಟ್ಟಿಗೆ, ನಾನು ಈಗಾಗಲೇ ತಿಳಿಸಿದಂತೆ, ಮಾಸ್ಕೊ ಮಕ್ಕಳಗ್ರಾಮದಂತಹ ಸಂಸ್ಥೆಗಳು ಅನಾಥ ಮಕ್ಕಳನ್ನು ಸ್ವಾಗತಿಸುತ್ತವೆ ಮತ್ತು ಅವರಿಗೆ ಸಹಾಯ ಮಾಡುತ್ತವೆ. (ಅನಾಥ ಮಕ್ಕಳು ಮತ್ತು ಭಿಕ್ಷುಕರು ಎಂದರೆ, ಪರಂಪರೆಯಿಂದಲೂ ಸಂಘಟಿಸಲು ಅಸಾಧ್ಯವಾದ ಅಲೆಮಾರಿಗಳಾಗಿರುತ್ತಾರೆ) ಸಾಕಷ್ಟು ಕೆಲಸ ಮಾಡಲಾಗಿದೆ; ಮತ್ತಷ್ಟು ಆಗುತ್ತದೆ; ಆದರೆ ಇನ್ನೂ ಸ್ವಲ್ಪ ಕಾಲ ಅಸಮರ್ಪಕತೆಗಳು ಉಳಿಯುತ್ತವೆ.

 ಅನುಬಂಧ – 2: ವೇಶ್ಯಾವಾಟಿಕೆ
ಸೋವಿಯತ್ ಸರ್ಕಾರವು ವೇಶ್ಯೆಯರನ್ನು ಹೇಗೆ ನೋಡುತ್ತದೆ ಎನ್ನುವುದನ್ನು ಹೇಳದಿದ್ದರೆ ಅಧ್ಯಾಯವು ಅಪೂರ್ಣವಾಗುತ್ತದೆ. ವೇಶ್ಯಾವೃತ್ತಿಯು ಹೆಚ್ಚುಕಡಿಮೆ ಸಂಪೂರ್ಣವಾಗಿ ಆರ್ಥಿಕ ಸಮಸ್ಯೆಯೆನ್ನುವುದು ಸಾಮಾನ್ಯವಾಗಿರುವ ದೋರಣೆಇದನ್ನು ಚಿಕ್ಕವಯಸ್ಸಿನಲ್ಲಾಗುವ ಮದುವೆಯು ಪಾಶ್ಚಿಮಾತ್ಯ ದೇಶಗಳಿಗಿಂತ ಇಲ್ಲಿ ಹೆಚ್ಚು ಸತ್ಯ ಎನ್ನುವಂತೆ ಮಾಡುತ್ತದೆ. ಇದು ಆರ್ಥಿಕ ಸಮಸ್ಯೆಯಾಗಿ ಸೋವಿಯತ್ ಆಡಳಿತದಲ್ಲಿ ಬಹಳ ವೇಗವಾಗಿ ಕಡಿಮೆಯಾಗುತ್ತಿದೆ...
ಕ್ರಾಂತಿಗೆ ಮುನ್ನ ಎಲ್ಲಾ ಯುರೋಪಿಯನ್ ನಗರಗಳಂತೆ ರಷ್ಯಾದ ದೊಡ್ಡ ನಗರಗಳಲ್ಲಿ ನೋಂದಾಯಿತ ವೇಶ್ಯೆಯರು ಬಹಳ ದೊಡ್ಡ ಸಂಖ್ಯೆಯಲ್ಲಿ (ಮಾಸ್ಕೊದಲ್ಲಿ 20,000 ಎನ್ನುತ್ತಾರೆ) ಇರುತ್ತಿದ್ದರು; ಅವರನ್ನು ಪೊಲೀಸರು ನಿಯತವಾಗಿ ತಪಾಸಣೆ ಮಾಡುತ್ತಿದ್ದರು. ವೇಶ್ಯೆಯರ ಸುಧಾರಣೆ ಮಾಡಲು 400 ಹಾಸಿಗೆಯುಳ್ಳ ಒಂದು ರೋಗನಿರೋಧಕ ಆಸ್ಪತ್ರೆ ಸಾಕೆಂದು ಪರಿಗಣಿಸಲಾಗಿದೆ. ಉಳಿದ ಆಸ್ಪತ್ರೆಗಳನ್ನು ಒಳರೋಗಿಗಳ ಕೊರತೆಯಿಂದಾಗಿ ಮುಚ್ಚಲಾಗಿದೆ. ವೇಶ್ಯಾವೃತ್ತಿಯಲ್ಲಲಿ ಇರುವವರಲ್ಲಿ ಹೆಚ್ಚಿನವರು ಯುವತಿಯರು ಮತ್ತು ಅನಕ್ಷಸ್ಥರು; ಅವರಿಗೆ ಶಿಕ್ಷಣ ಹಾಗೂ ತರಬೇತಿ ನೀಡಿ, ಅವರನ್ನು ಸತ್ಪ್ರಜೆಗಳನ್ನಾಗಿ ಮಾಡುವ ಸಂಸ್ಥೆಯೇರೋಗನಿರೋಧಕ ಆಸ್ಪತ್ರೆ.” ಅವರನ್ನು ವಿವಿಧ ರೀತಿಯಲ್ಲಿ ಹುಡುಕಿ ಕರೆತರಲಾಗುತ್ತದೆ ಮತ್ತು ಕೆಲವರು ಸ್ವತಃ ತಾವಾಗಿಯೇ ಬರುತ್ತಾರೆ. ಮೊದಲಿಗೆ ಅವರಿಗೆ ಯಾವ ಪ್ರಶ್ನೆಯನ್ನೂ ಕೇಳುವುದಿಲ್ಲ; ಆದರೆ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಚಿಕಿತ್ಸೆ ನೀಡಲಾಗುತ್ತದೆ; ನಂತರ ಕ್ರಮೇಣವಾಗಿ ಅವಶ್ಯಕವಾಗಿರುವ ಮಾಹಿತಿಗಳನ್ನು ಪಡೆದುಕೊಳ್ಳಲಾಗುತ್ತದೆ. ಅವರು ಕೆಲವು ಸರಳವಾದ ಮತ್ತು ವಿವೇಚನೆಯುಳ್ಳ ನಿಯಂತ್ರಣಗಳೊಂದಿಗೆ ತಮ್ಮನ್ನು ತಾವೇ ನಿರ್ವಹಿಸಿಕೊಳ್ಳುತ್ತಾರೆ. ಅವರು ಕೆಲಸವನ್ನೂ ಕಲಿಯುತ್ತಾರೆ (ಅದಕ್ಕೆ ಹೊಂದಿಕೊಂಡಿರುವ ಕಾರ್ಖಾನೆಯಿರುತ್ತದೆ); ಅವರು ಕೆಲಸವನ್ನು ಕಲಿತ ಮೇಲೆ ನಿಗದಿತ ಪ್ರಮಾಣದಲ್ಲಿ ವೇತನವನ್ನು ನೀಡಲಾಗುತ್ತದೆ ಮತ್ತು ಅವರು ತಮ್ಮ ಊಟಕ್ಕೆ ತಾವೇ ಹಣ ನೀಡಬೇಕು. ಕುತೂಹಲಕಾರಿ ಅಂಶವೆಂದರೆ, ವೇತನವು ಅವರು ಹಿಂದೆ ಸಂಪಾದಿಸುತ್ತಿದ್ದ ಸರಾಸರಿ ಹಣಕ್ಕಿಂತ ಕಡಿಮೆ ಇರುತ್ತದೆ. ಅಲ್ಲಿ ವಿವಿಧ ರೀತಿಯ ಕ್ಲಬ್ಗಳಿವೆ, ದೈಹಿಕ ವ್ಯಾಯಾಮ ತರಗತಿಗಳಿವೆ ಮತ್ತು ಇನ್ನಿತರ ಚಟುವಟಿಕೆಗಳಿವೆ; ವಾಸ್ತವವಾಗಿ ಎಷ್ಟು ಸಾಧ್ಯವೋ ಅಷ್ಟೂ ಸಹಜವಾಗಿ ಜೀವನ ಸಾಗುತ್ತದೆ. ಅಲ್ಲಿಂದ ಹೊರಹೋಗುವವರ ಕುರಿತು ದಾಖಲೆಗಳಿರುತ್ತವೆ ಮತ್ತು ಪ್ರತಿ ಆರು ತಿಂಗಳಿಗೊಮ್ಮೆ ನಡೆಯುವ ಸಮ್ಮೇಳನದಲ್ಲಿ ಹಿಂದೆ ವಾಸವಿದ್ದವರು ಬಂದು ಸಲಹೆಗಳನ್ನು ನೀಡುತ್ತಾರೆ. ಅಲ್ಲಿಯ ಸ್ಥಳ ಪ್ರಕಾಶಮಾನವಾಗಿರುತ್ತದೆ, ಸ್ವಚ್ಛವಾಗಿರುತ್ತದೆ ಮತ್ತು ಆರೋಗ್ಯಕರವಾಗಿರುತ್ತದೆ; ಅಲ್ಲಿನ ಹೆಣ್ಣುಮಕ್ಕಳು ಜೀವಕಳೆ ತುಂಬಿದವರಂತೆ, ಆಸಕ್ತಿಯಿಂದಿರುವಂತೆ ಮತ್ತು ಯಾವುದೇ ಅಪರಾಧಿ ಮನೋಭಾವನೆಯಿಂದ ತುಳಿತಕ್ಕೆ ಒಳಗಾಗದವರಂತೆ ಕಾಣುತ್ತಾರೆ. ಸಂಸ್ಥೆಯು ಸ್ವ-ಸಹಾಯಕವಾಗಿದೆ ಮತ್ತು ಸರ್ಕಾರದಿಂದ ಯಾವ ಅನುದಾನವನ್ನೂ ಪಡೆಯುವುದಿಲ್ಲ ಎನ್ನುವುದನ್ನೂ ಇಲ್ಲಿ ಸೇರಿಸಬೇಕು.

-    ಎಸ್.ಎನ್.ಸ್ವಾಮಿ


No comments:

Post a Comment